ಈ ಬದನೆ ಕೃಷಿ ಪದ್ಧತಿ ಕುರಿತು ರೈತ ಪಾಂಡಿಯನ್ ಮಾತನಾಡಿ, ಬದನೆ ಕೃಷಿಯನ್ನು ಉತ್ತಮವಾಗಿ ನಿರ್ವಹಿಸಿದರೆ ಖಂಡಿತ ಉತ್ತಮ ಲಾಭವನ್ನು ಕಾಣಬಹುದಾಗಿದೆ ಎಂದ ಅವರು, ಬದನೆ ಬೆಳೆಯಲು ಇಚ್ಛಿಸುವ ರೈತರು, ಆರಂಭದಲ್ಲೇ ಎಕರೆಗಟ್ಟಲೇ ಕೃಷಿ ಮಾಡದೆ, ಮೊದಲು ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. 30 ಸೆಂಟ್ಸ್ 40 ಸೆಂಟ್ಗಳಲ್ಲಿ ಮೊದಲು ಕೃಷಿ ಮಾಡಿ ನಂತರ ಎಕರೆಗಟ್ಟಲೆ ಬೆಳೆಯಬೇಕು ಎಂದರು.