ನಮ್ಮ ತಾತ ಮುತ್ತಾತಂದಿರು ಹಲವು ದಶಕಗಳ ಕಾಲ ಅವರಿಗೆ ಗೊತ್ತಿರುವ ಕೃಷಿಯನ್ನು ಮಾಡುತ್ತಾ ಬಂದಿದ್ದರು. ಆದರೆ ನಾವು ಕೂಡ ಅದೇ ಕೃಷಿಯನ್ನು ಮುಂದುವರಿಸಿದರೆ ಹೇಗೆ? ಹೊಸದನ್ನು ಮಾಡಲು ಪ್ರಯತ್ನಿಸಬೇಕು. ನಾವು ಏನೆಂದು ಜಗತ್ತಿಗೆ ತೋರಿಸಬೇಕು. ಅದಕ್ಕಾಗಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕು ಎಂದು ಇಲ್ಲೊಬ್ಬ ಯುವ ರೈತ ಆಲೋಚಿಸಿ, ಯಶಸ್ಸು ಸಾಧಿಸಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಸಾಮಾನ್ಯವಾಗಿ ರೈತರು ಬೆಳೆಯುತ್ತಿದ್ದ ಕಬ್ಬಿನ ಬೆಳೆಯನ್ನು ಕೈಬಿಟ್ಟು, ಬದಲಾಗಿ ಅವರ ಪ್ರಾಯೋಗಾತ್ಮಕ ಕೃಷಿ ಮಾಡಿ ಸೂಪರ್ ಸಕ್ಸಸ್ ಕಂಡಿದ್ದಾರೆ.