ಬೀಜ ಬಿತ್ತಿದ ಒಂದೂವರೆಯಿಂದ ಎರಡು ತಿಂಗಳಲ್ಲಿ ಬಳ್ಳಿಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಎಳೆಯ ಕಾಯಿಗಳು ಒಂದು ಹಂತ ತಲುಪಿದ ಕೂಡಲೇ ಕೊಯ್ಲು ಮಾಡಬೇಕು. ಇಲ್ಲವಾದರೆ ಬಳ್ಳಿಗಳಲ್ಲೇ ಬಲಿತು ಹಣ್ಣಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದಿಲ್ಲ. ಸೌತೇಕಾಯಿಯನ್ನು ಹೆಚ್ಚು ದಿನ ಸಂಗ್ರಹ ಮಾಡಿ ಇಡಲು ಸಾಧ್ಯವಿಲ್ಲ. ಬೇಗ ಹಾಳಾಗುವ ಕಾರಣದಿಂದ ಶೀಘ್ರವೇ ಸೌತೇಕಾಯಿಯನ್ನು ಮಾರಾಟ ಮಾಡಬೇಕಾಗುತ್ತದೆ.
ಬೆಲೆಯ ವಿಷಯಕ್ಕೆ ಬಂದರೆ ಚಳಿಗಾಲದಲ್ಲಿ ಬಿಟ್ಟರೆ ಉಳಿದ ಎಲ್ಲಾ ಋತುಮಾನಗಳಲ್ಲಿಯೂ ಸೌತೇಕಾಯಿಗೆ ಉತ್ತಮ ಬೆಲೆಯಿರುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ 30 ರಿಂದ 40 ರೂಪಾಯಿಯಿದೆ. ಬೇಸಿಗೆಯಲ್ಲಿ ಸೌತೆಕಾಯಿಗೆ ಬಂಪರ್ ಬೆಲೆ ಸಿಗಲಿದೆ. ಹಾಗಾಗಿ ಸೌತೇಕಾಯಿ ಬೆಳೆಯುವ ರೈತರು ಎಕರೆಗೆ 35 ರಿಂದ 40 ಸಾವಿರ ಖರ್ಚು ಮಾಡಿದರೆ 2 ರಿಂದ 3 ಲಕ್ಷದವರೆಗೆ ಲಾಭಗಳಿಸಬಹುದು. ಸಮಯಕ್ಕೆ ಸರಿಯಾಗಿ ಔಷಧಗಳನ್ನು ಬಳಸಿದರೆ ಹೆಚ್ಚಿನ ಲಾಭವನ್ನೂ ಗಳಿಸಬಹುದು.