Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

strawberry Farming: ಕಷ್ಟಪಟ್ಟು ದುಡಿದರೆ ಲಕ್ಷ್ಮಿ ತಾನೇ ಒಲಿದು ಬರುತ್ತಾಳೆ ಎಂಬ ಗಾದೆ ಮಾತು ಕೇಳಿದ್ದೇವೆ. ವಿದೇಶದಲ್ಲಿ ನೆಮ್ಮದಿಯ ಜೀವನ ಬಿಟ್ಟು ತನ್ನ ಹಳ್ಳಿಯಲ್ಲಿ ಕೃಷಿ ಮಾಡಲು ನಿರ್ಧರಿಸಿ ಇಂದು ವರ್ಷಕ್ಕೆ 15 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.

First published:

  • 18

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ದೇಶದ ಆರ್ಥಿಕತೆಗೆ ಕೃಷಿಯ ಕೊಡುಗೆ ಅಪಾರ. ಆದರೆ ಇಂದಿನ ದಿನಗಳಲ್ಲಿ ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ. ಯುವಕರು ಕೃಷಿಗಿಂತ ಬೇರೆ ಉದ್ಯೋಗದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಹಾಗಾಗಿ ಕೃಷಿ ಮಾಡುವುದು ಸುಲಭವಲ್ಲ ಎಂಬ ಭಾವನೆ ಕೆಲವರ ಮನದಲ್ಲಿದೆ.

    MORE
    GALLERIES

  • 28

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ಆದರೆ, ಸರಿಯಾದ ಯೋಜನೆ ಮತ್ತು ಆಧುನಿಕ ವಿಧಾನಗಳೊಂದಿಗೆ ಕೃಷಿ ಮಾಡಿದರೆ, ಇದು ಇತರ ಯಾವುದೇ ಉದ್ಯೋಗ, ವ್ಯವಹಾರಕ್ಕಿಂತ ಹೆಚ್ಚು ಲಾಭ ತಂದುಕೊಡುತ್ತದೆ ಎನ್ನುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಉದಯಪುರದಲ್ಲಿ ದಂಪತಿ ಸಾಬೀತು ಮಾಡಿದ್ದಾರೆ.

    MORE
    GALLERIES

  • 38

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ಉದಯಪುರದ ಈ ದಂಪತಿ ವಿದೇಶಿದಲ್ಲಿ ಲಕ್ಷಗಟ್ಟಲೇ ಸಂಬಳವಿದ್ದ ಉದ್ಯೋಗ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಆದುನಿಕ ಬೇಸಾಯದಿಂದ ಅಪಾರ ಆದಾಯಗಳಿಸುತ್ತಿರುವ ಈ ದಂಪತಿ ದೇಶದ ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

    MORE
    GALLERIES

  • 48

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ಉದಯಪುರದ ನಿವಾಸಿಗಳಾದ ಕೀರ್ತಿ ಸಿಂಘ್ವಿ ಮತ್ತು ಸೌರವ್ ಸಿಂಘ್ವಿ ಅವರು ಯುರೋಪಿನ ನಾರ್ವೆ ನಗರದಲ್ಲಿ ವಾಸಿಸುತ್ತಿದ್ದರು ಮತ್ತು ಉತ್ತಮ ಸಂಬವಳವುಳ್ಳ ಉದ್ಯೋಗವನ್ನೂ ಹೊಂದಿದ್ದರು. ಆದರೆ ತಮ್ಮ ದೇಶದಲ್ಲಿ ಏನನ್ನಾದರೂ ಮಾಡುವ ಬಯಕೆಯಿಂದ ಭಾರತಕ್ಕೆ ಬಂದು ವ್ಯವಸಾಯ ಮಾಡುವ ನಿರ್ದಾರ ತೆಗೆದುಕೊಂಡಿದ್ದಾರೆ.

    MORE
    GALLERIES

  • 58

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ಭಾರತಕ್ಕೆ ಬಂದ ನಂತರ ಈ ದಂಪತಿ ಸ್ಟ್ರಾಬೆರಿ ಕೃಷಿ ಮಾಡಲು ನಿರ್ಧರಿಸಿದರು. ಆರಂಭದಲ್ಲಿ ಸುಮಾರು 2 ಸಾವಿರ ಗಿಡಗಳನ್ನು ನೆಟ್ಟಿದ್ದರು. ಇಂದು ಅವರು ತಮ್ಮ ಹೊಲದಲ್ಲಿ 10,000 ಸ್ಟ್ರಾಬೆರಿ ಸಸ್ಯಗಳನ್ನು ಬೆಳೆಸಿದ್ದಾರೆ.

    MORE
    GALLERIES

  • 68

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ಸ್ಟ್ರಾಬೆರಿಗಳನ್ನು ಬೆಳೆಸುವ ಕಲ್ಪನೆ ಎಲ್ಲಿಂದ ಬಂತು? ಸ್ಟ್ರಾಬೆರಿಗಳು ಈ ದಂಪತಿಯ ಮಕ್ಕಳು ತುಂಬಾ ಇಷ್ಟಪಡುತ್ತಿದ್ದರು. ಹಾಗಾಗಿ ಈ ಇಬ್ಬರಿಗೂ ಸ್ಟ್ರಾಬೆರಿ ಮತ್ತು ಬ್ಲೂಬೆರಿ ಬೆಳೆಸುವ ಆಲೋಚನೆ ಮಾಡಿದ್ದಾರೆ. ಮೊದಲು ಸ್ಟ್ರಾಬೆರಿ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ಇವರ ಹೊಲದಲ್ಲಿ 10 ಸಾವಿರಕ್ಕೂ ಹೆಚ್ಚು ಗಿಡಗಳಿದ್ದು, ಬೇಸಿಗೆಯಲ್ಲಿ ಪ್ರತಿದಿನ ಸುಮಾರು 20 ಕೆಜಿ ಸ್ಟ್ರಾಬೆರಿ ಕಟಾವು ಮಾಡಲಾಗುತ್ತಿದೆ.

    MORE
    GALLERIES

  • 78

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ಖರ್ಚೆಷ್ಟು?: ಉದಯಪುರದ ಗೋಗುಂಡಾ ಪ್ರದೇಶದಲ್ಲಿ ಈ ದಂಪತಿ ಭೂಮಿಯನ್ನು ಖರೀದಿಸಿ ಸಮತಟ್ಟು ಮಾಡುವುದಕ್ಕಾಗಿ ಸುಮಾರು 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಇದೀಗ ಈ ಕೃಷಿ ಅವರಿಗೆ ಫಲ ನೀಡಿದೆ. ಸ್ಟ್ರಾಬೆರಿ ಕೃಷಿ ಆರಂಭಿಸಿದಾಗಿನಿಂದ ವಾರ್ಷಿಕವಾಗಿ ಸುಮಾರು 12 ರಿಂದ 15 ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

    MORE
    GALLERIES

  • 88

    Success Story: ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿ ಆರಂಭಿಸಿದ ದಂಪತಿ! ವರ್ಷಕ್ಕೆ 15 ಲಕ್ಷ ಸಂಪಾದಿಸಿ ಮಾದರಿಯಾದ್ರು

    ಸ್ಟ್ರಾಬೆರಿ ಕೃಷಿಗೆ ಯಾವ ರೀತಿಯ ಹವಾಮಾನ ಬೇಕು? ದಂಪತಿ ಪ್ರಕಾರ, ಉದಯಪುರದ ಹವಾಮಾನವು ಆಗಾಗ್ಗೆ ಬದಲಾಗುತ್ತಿರುತ್ತದೆ. ಇದಕ್ಕಾಗಿಯೇ ಸ್ಟ್ರಾಬೆರಿ ಗಿಡಗಳನ್ನು ಉಳಿಸಿಕೊಳ್ಳಲು ಅದರ ಸುತ್ತಲೂ ಇತರ ಸಸ್ಯಗಳನ್ನು ಸಹ ನೆಡಲಾಗುತ್ತದೆ. ಈ ರೀತಿ ಮಾಡುವುದರಿಂದ ಸ್ಟ್ರಾಬೆರಿ ಸಸ್ಯವು ಹುಲುಸಾಗಿ ಬೆಳೆಯಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿಗಳ ಹೊರತಾಗಿ, ಅನೇಕ ಸ್ಥಳೀಯ ಮತ್ತು ವಿದೇಶಿ ತರಕಾರಿಗಳು ಮತ್ತು ಹಣ್ಣಿನ ಗಿಡಗಳನ್ನು ಅವರ ಜಮೀನಿನಲ್ಲಿ ಬೆಳೆಸಲಾಗುತ್ತಿದೆ.

    MORE
    GALLERIES