ಹಾಗಾಗಿ ಬಾಬುಲಾಲ್ ಅವರು ರೆನ್ ನದಿಯ ದಡದಲ್ಲಿರುವ ಗ್ರಾಮದ ಜನರಿಂದ 30 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ವೈಜ್ಞಾನಿಕ ಪದ್ಧತಿಯಲ್ಲಿ ಸಾಗುವಳಿ ಮಾಡಿದ್ದಾರೆ. 2022ರ ಮೇ ತಿಂಗಳಲ್ಲಿ ಕೃಷಿ ಆರಂಭಿಸಿರುವುದಾಗಿ ರೈತ ಬಾಬುಲಾಲ್ ಯಾದವ್ ತಿಳಿಸಿದ್ದಾರೆ. ಆರಂಭದಲ್ಲಿ ಡ್ರಿಪ್, ಬಿದಿರು, ತಂತಿ ಎಲ್ಲಾ ಸೇರಿ 40 ರಿಂದ 45 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಬಾಬುಲಾಲ್ ಟೊಮ್ಯಾಟೊ ಮತ್ತು ಸೋರೆಕಾಯಿ ಬೆಳೆ ಬೆಳೆದಿದ್ದರು. ಇದರಿಂದ ಉತ್ತಮ ಲಾಭವನ್ನು ಪಡೆದು, ಸುಮಾರು 20 ಲಕ್ಷ ರೂಪಾಯಿ ಗಳಿಸಿದ್ದಾರೆ. ಬೆಂಡೆಕಾಯಿ ಬೆಳೆಯಲ್ಲೂ ಉತ್ತಮ ಇಳುವರಿ ಬಂದಿದೆ. ಸಾವಯವ ಕೃಷಿಯಿಂದ ಉತ್ತಮ ಇಳುವರಿ ಬರುತ್ತಿದೆ ಎನ್ನುತ್ತಾರೆ ಬಾಬುಲಾಲ್. ಈ ಪದ್ಧತಿಯಲ್ಲಿ ಕೃಷಿ ಮಾಡಿದರೆ ಉತ್ತಮ ಲಾಭದ ಜೊತೆಗೆ ಬೆಳೆಗಳ ಜೀವಿತಾವಧಿ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ನಲ್ಲಿ ಕೃಷಿ ವಿಡಿಯೋ ನೋಡುತ್ತಿದ್ದೆ. ಆ ನಂತರ ನನ್ನ ಮನಸಲ್ಲೂ ಬೇಸಾಯದ ಯೋಚನೆ ಬಂತು. ಅಂದಿನಿಂದ ಕೃಷಿ ಮಾಡಲು ಪ್ರಾರಂಭಿಸಿದೆ. ಯೂಟ್ಯೂಬ್ ಮತ್ತು ಗೂಗಲ್ ಅನ್ನು ಕೃಷಿಗೆ ನನ್ನ ಮಾರ್ಗದರ್ಶಕರಾಗಿ ಪರಿಗಣಿಸಿದ್ದೇನೆ. ನೆಟ್‌ನಲ್ಲಿ ಕೃಷಿ ಮಾಡುವ ಸೂಚನೆಗಳನ್ನು ಅನುಸರಿಸಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಆರಂಭಿಸಿದೆ.. ಕೃಷಿ ಸಂಬಂಧಿತ ಸಮಸ್ಯೆಗಳಿದ್ದರೆ ಗೂಗಲ್, ಯೂಟ್ಯೂಬ್ನಲ್ಲಿ ಪರಿಹಾರ ಹುಡುಕಿಕೊಂಡು ಸಲಹೆ ಪಡೆಯುತ್ತೇನೆ ಎನ್ನುತ್ತಾರೆ ಬಾಬುಲಾಲ್.