ಈ ಪ್ರದೇಶಗಳಲ್ಲಿ ಸಂಸ್ಕರಣಾ ಘಟಕಗಳಿಲ್ಲದ ಕಾರಣ ತೋಟದಲ್ಲಿನ ಗೋಡಂಬಿಯನ್ನು ಬಿಡಿಸಿ ಇಲ್ಲಿನ ರೈತರು ನೇರವಾಗಿ ರಸ್ತೆ ಬದಿ ಮಾರಾಟ ಮಾಡುತ್ತಾರೆ. ವರ್ತಕರು ಅವರಿಂದ ಹೆಚ್ಚಿನ ಪ್ರಮಾಣದಲ್ಲಿ ಹಸಿ ಗೋಡಂಬಿ ಖರೀದಿಸುತ್ತಾರೆ. ಬಳಿಕ ಅವುಗಳನ್ನು ಸಂಸ್ಕರಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಸಂಸ್ಕರಣಾ ಘಟಕ ಸ್ಥಾಪಿಸಿದರೆ ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಒಳ್ಳೆಯ ಲಾಭವನ್ನು ಪಡೆಯಬಹುದು.