ರೈತರಿಗೆ ರಸಗೊಬ್ಬರ ಸಬ್ಸಿಡಿ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರೈತರಿಗೆ ರಸಗೊಬ್ಬರದ ಮೇಲೆ ನೀಡುವ ಸಹಾಯಧನಕ್ಕೆ ಅನುಮೋದನೆ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಖಾರಿಫ್ ಹಂಗಾಮಿನ ಮೊದಲು ರೈತರಿಗೆ ರಸಗೊಬ್ಬರಗಳ ಮೇಲೆ ನೀಡಲಾಗುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ. (ಸಾಂಕೇತಿಕ ಚಿತ್ರ)
ರೈತರಿಗೆ ಗುಣಮಟ್ಟದ ಸಬ್ಸಿಡಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಪೂರೈಸಲು, ಸರ್ಕಾರವು 2023 ರ ಖಾರಿಫ್ ಹಂಗಾಮಿಗೆ 38,000 ಕೋಟಿ ರೂಪಾಯಿಗಳನ್ನು ಸಬ್ಸಿಡಿ ನೀಡುತ್ತದೆ. ಕ್ಯಾಬಿನೆಟ್ ನಿರ್ಧಾರದಿಂದ ಡಿಎಪಿ ಮತ್ತು ಇತರ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳನ್ನು ರೈತರಿಗೆ ಲಭ್ಯವಾಗುತ್ತದೆ ಎಂದರು. (ಸಾಂಕೇತಿಕ ಚಿತ್ರ)