ಇಂದು ನಾವು ನಿಮಗೆ ಹೇಳಲು ಹೊರಟಿರುವುದು ನೀವು ಆರಾಮವಾಗಿ ಮಿಲಿಯನೇರ್ ಆಗುವ ಕೃಷಿಯ ಬಗ್ಗೆ. ಹೌದು, ನಾವು ಹೇಳುತ್ತಿರುವ ಹಣ್ಣು ಕಿವಿ ಕೃಷಿ. ಮಾರುಕಟ್ಟೆಯಲ್ಲಿ ಈ ಹಣ್ಣನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ನಿಮಗೆ ಗೊತ್ತಿದೆ. ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು ಈ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ. ಏಕೆಂದರೆ ಈ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಬಹುಬೇಗ ಹೆಚ್ಚುತ್ತದೆ.
ಕಿವಿ ಹಣ್ಣನ್ನು ಬೆಳೆಸಿದರೆ ಎಷ್ಟು ಲಾಭ? - ಮಾರುಕಟ್ಟೆಯಲ್ಲಿ ಒಂದು ಕಿವಿ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತೆ. 1 ಕೆಜಿ ಹಣ್ಣಿನಲ್ಲಿ 8 ಕಿವಿ ಹಣ್ಣುಗಳು ಇರುತ್ತವೆ, ಇದನ್ನು 300 ರೂಪಾಯಿ ಮಾರಾಟ ಮಾಡಲಾಗುತ್ತೆ. ಹಾಗಾಗಿ ಪ್ರತಿ ಮರದಿಂದ 20 ಕೆಜಿ ಕಿವಿ ಹಣ್ಣು ಉತ್ಪಾದನೆಯಾಗುತ್ತದೆ. ಹೀಗೆ 1 ಎಕರೆಯಲ್ಲಿ 300 ಕಿವಿ ಗಿಡಗಳನ್ನು ನೆಟ್ಟರೆ, 300 ಮರಗಳಿಂದ 18 ಲಕ್ಷ ರೂಪಾಯಿ ಗಳಿಸಬಹುದು. ಅದರಲ್ಲಿ 3 ಲಕ್ಷ ಖರ್ಚು ಕಳೆದು 15 ಲಕ್ಷ ರೂಪಾಯಿ ಲಾಭ.