ಒಂದು ಎಕರೆ ಜಮೀನಿನಲ್ಲಿ ಕರಿಮೆಣಸು ಬೇಸಾಯ ಮಾಡಬಹುದು. ವಿಶ್ವದ ಕಾಳುಮೆಣಸಿನ ಉತ್ಪಾದನೆಯಲ್ಲಿ ಶೇ.54 ಭಾರತದಿಂದ ಬರುತ್ತದೆ. ಪ್ರಸ್ತುತ ಕೇರಳ, ಕರ್ನಾಟಕ, ಬಂಗಾಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮಿಳುನಾಡು ಮತ್ತು ಕೊಂಕಣದಲ್ಲಿ ಮೆಣಸು ಬೆಳೆಯಲಾಗುತ್ತದೆ. ಕಾಳುಮೆಣಸಿಗೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಅವುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕಾಗಿಯೇ ಅವುಗಳನ್ನು ಕಪ್ಪು ಚಿನ್ನ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಶೇ 90ರಷ್ಟು ಕಾಳುಮೆಣಸನ್ನು ಕೇರಳ ಉತ್ಪಾದಿಸುತ್ತದೆ.
ಕಾಳುಮೆಣಸಿಗೆ ಬೆಲೆ ಹೆಚ್ಚಿರುವುದಕ್ಕೆ ಕಾರಣ ಕೃಷಿ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಕಾಳುಮೆಣಸಿನ ಮರಗಳು ಅರಳಿದ ಆರು ತಿಂಗಳ ನಂತರ ಮೆಣಸು ಬರುತ್ತದೆ. ಈ ಕೃಷಿ ಕೈಗೆತ್ತಿಕೊಳ್ಳುವ ರೈತರಿಗೆ ತಾಳ್ಮೆ ಜಾಸ್ತಿ. ಭಾರತದಲ್ಲಿ 75 ಬಗೆಯ ಮೆಣಸುಗಳಿವೆ ಎಂದು ನಿಮಗೆ ಗೊತ್ತಿದ್ಯಾ? ಇವುಗಳಲ್ಲಿ ಕರಿಮುಂಡ ಅತ್ಯಂತ ಜನಪ್ರಿಯವಾಗಿದೆ. ಈ ರೀತಿಯ ಕಾಳುಮೆಣಸನ್ನು ಕೇರಳದಲ್ಲಿ ಬೆಳೆಯಲಾಗುತ್ತದೆ.
ಈ ಮರಗಳು ಮರಳು, ಜೇಡಿ ಮಣ್ಣು ಮತ್ತು ಕೆಂಪು ಮಣ್ಣಿನಲ್ಲಿ ಬೆಳೆಯಬಹುದು. ಮಣ್ಣಿನಲ್ಲಿ ಯಾವುದೇ ಕಲ್ಲುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಮಣ್ಣಿನ pH 5 ರಿಂದ 6.5 ರ ನಡುವೆ ಇರಬೇಕು. 10 ಅಡಿ ಎತ್ತರ ಹೆಚ್ಚಾದರೆ, ಇಳುವರಿ ಬರುತ್ತದೆ. ಇದು 6 ತಿಂಗಳು ತೆಗೆದುಕೊಳ್ಳುತ್ತದೆ. ಉದಾಹರಣೆಗೆ ನವೆಂಬರ್ ನಲ್ಲಿ ಗಿಡಗಳನ್ನು ನೆಟ್ಟರೆ, ಮಾರ್ಚ್ ನಂತರ ಇಳುವರಿ ಬರುತ್ತದೆ. ಕಾಳುಮೆಣಸಿನ ಗೊಂಚಲುಗಳನ್ನು ಕೈಯಿಂದ ಕೊಯ್ಲು ಮಾಡಲಾಗುತ್ತದೆ. ಒಮ್ಮೆ ಗಿಡಗಳನ್ನು ನೆಟ್ಟರೆ 8 ವರ್ಷಗಳವರೆಗೆ ಬೆಳೆಸಬಹುದು.
ಲಾಭವನ್ನು ನೋಡಿದರೆ ಒಂದು ಕೆಜಿ ಕಾಳುಮೆಣಸನ್ನು 400 ರೂ.ಗೆ ರೈತರು ಮಾರುತ್ತಿದ್ದಾರೆ. 8 ವರ್ಷದಲ್ಲಿ 3000 ಕೆಜಿ ಇಳುವರಿ ಬರುತ್ತದೆ ಎಂದು ಭಾವಿಸಬಹುದು. ಈ ಲೆಕ್ಕಾಚಾರದ ಪ್ರಕಾರ ಇವುಗಳನ್ನು ಮಾರಾಟ ಮಾಡುವ ಮೂಲಕ ರೈತನಿಗೆ 12 ಲಕ್ಷ ರೂಪಾಯಿ ಸಿಗುತ್ತೆ. 8 ವರ್ಷದಲ್ಲಿ ರೈತನ ಖರ್ಚು ಸುಮಾರು 75 ಸಾವಿರ ರೂಪಾಯಿ. ಒಟ್ಟು ಆದಾಯದಲ್ಲಿ ಖರ್ಚು ಕಳೆದರೆ, ರೈತನಿಗೆ ಉಳಿದ ಲಾಭ 11 ಲಕ್ಷದ 25 ಸಾವಿರ ರೂ. ಇದೆಲ್ಲವೂ ಆ ರೈತ 8 ವರ್ಷಗಳಲ್ಲಿ ಒಂದು ಎಕರೆ ಜಮೀನಿನಿಂದ ಗಳಿಸಿದ ಲಾಭ.