ನೀಲಿ ಬಣ್ಣದ ಗೋಧಿಯ ಪ್ರಯೋಜನಗಳು: ನೀಲಿ ಬಣ್ಣದ ಗೋಧಿ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಎಂದು ನಂಬಲಾಗಿದೆ. ಇಂತಹ ಗೋಧಿಯ ಗುಣಗಳ ಬಗ್ಗೆ ತಿಳಿಸಿದ ತಜ್ಞ ಅಶುತೋಷ್ ವರ್ಮಾ, ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದೊಂದಿಗೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ನೀಲಿ ಬಣ್ಣದ ಗೋಧಿ ಸಹಕಾರಿಯಾಗಿದೆ ಎಂದು ಹೇಳಿದರು.