Success Story: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ

ಸಾಂಪ್ರದಾಯಿಕ ಮತ್ತು ವಾಣಿಜ್ಯ ಬೆಳೆಗಳಲ್ಲಿ ನಷ್ಟ ಅನುಭವಿಸುತ್ತಿರುವ ರೈತರು ಪರ್ಯಾಯ ಬೆಳೆಗಳತ್ತ ಗಮನ ಹರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬುದನ್ನು ಈ ಯುವ ರೈತ ಸಾಬೀತುಪಡಿಸುತ್ತಾನೆ.

First published:

 • 17

  MORE
  GALLERIES

 • 27

  Success Story: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ

  ಈ ಯುವ ರೈತ ತನ್ನ ಚಿಕ್ಕ ಜಮೀನಿನಲ್ಲಿ ತರಕಾರಿ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದು, ನೆರೆಹೊರೆಯವರಿಗೂ ಮಾದರಿಯಾಗಿದ್ದಾರೆ. ಸೀಸನ್​ಗೆ ತಕ್ಕಂತೆ ತರಕಾರಿ ಬೆಳೆದು ಆ ತರಕಾರಿಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.

  MORE
  GALLERIES

 • 37

  Success Story: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ

  ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಗೊಲ್ಲಪಲ್ಲಿಯ ಯುವ ರೈತ ಮಲ್ಲೇಶ್ ಯಾದವ್ ತರಕಾರಿ ಕೃಷಿಯಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ. ತಮ್ಮ ಸಣ್ಣ ಜಮೀನಿನಲ್ಲಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಇಳುವರಿ ನೀಡುವ ತರಕಾರಿ, ಸೊಪ್ಪುಗಳನ್ನು ಬೆಳೆದು ಲಾಭ ಗಳಿಸುತ್ತಿದ್ದಾರೆ.

  MORE
  GALLERIES

 • 47

  Success Story: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ

  ಈ ಸಂದರ್ಭದಲ್ಲಿ ನ್ಯೂಸ್ 18 ಜೊತೆ ಮಾತನಾಡಿದ ಮಲ್ಲೇಶ್, ರೈತ ಕುಟುಂಬದಲ್ಲಿ ಹುಟ್ಟಿ, ಬಾಲ್ಯದಿಂದಲೇ ತಂದೆಯೊಂದಿಗೆ ಕೃಷಿ ಕಲಿತೆ. ಹಗಲಿನಲ್ಲಿ ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ, ಅದರೆ ಲಾಭವೇನೂ ಸಿಗುತ್ತಿರಲಿಲ್ಲ ಎಂದರು. ನಾವು ಹಾಕಿದ ಬಂಡವಾಳಕ್ಕೆ ಸಾಕಷ್ಟು ಇಳುವರಿ ಬರದಿದ್ದಾಗ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಈ ಕಾರಣದಿಂದ ನಾವು ಪರ್ಯಾಯ ಬೆಳೆಗಳತ್ತ ಗಮನ ಹರಿಸಿದೆವು. ಕಾಲಕ್ಕೆ ತಕ್ಕ ತರಕಾರಿ ಬೆಳೆಯಲು ಪ್ರಾರಂಭಿಸಿದೆವು ಎಂದು ಮಲ್ಲೇಶ್ ತಿಳಿಸಿದ್ದಾರೆ.

  MORE
  GALLERIES

 • 57

  Success Story: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ

  ಹಿಂಗಾರು ಹಂಗಾಮಿನಲ್ಲಿ ಕಲ್ಲಂಗಡಿ, ಸೌತೇಕಾಯಿ ಮುಂತಾದ ಬೆಳೆಗಳನ್ನು ಬೆಳೆಯುವ ಮಲ್ಲೇಶ್ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದೇ ರೀತಿ ಕೃಷಿ ಮಾಡಿ ಸ್ವಲ್ಪ ಜಮೀನನ್ನೂ ಖರೀದಿಸಿದ್ದಾರೆ. ತರಕಾರಿ ಕೃಷಿಯಲ್ಲಿ ಉತ್ತಮ ಲಾಭ ಬರುತ್ತಿರುವುದರಿಂದ ಕುಟುಂಬದವರೆಲ್ಲ ಸೇರಿ ತರಕಾರಿ ಕೃಷಿ ಮಾಡುತ್ತಿದ್ದಾರೆ ಎಂದರು.

  MORE
  GALLERIES

 • 67

  Success Story: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ

  ತರಕಾರಿಗಳು ರೈತನಿಗೆ ದೈನಂದಿನ ಆದಾಯವನ್ನು ನೀಡುವ ಬೆಳೆಗಳಾಗಿವೆ. ಋತುಮಾನಕ್ಕೆ ಅನುಗುಣವಾಗಿ ವಿವಿಧ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯಬಹುದು. ಎಲ್ಲಾ ಸೀಸನ್ ತರಕಾರಿಗಳನ್ನು ಬೆಳೆಸುವುದು ತುಂಬಾ ಕೆಲಸವಾಗಿದೆ. ರೈತ ಮಲ್ಲೇಶ್ ಅವರ ಬಳಿ ಕೇವಲ 25 ಗುಂಟೆ ಜಮೀನಿದೆ. ಅದರಲ್ಲಿ ಹಾಗಲಕಾಯಿ, ಅಲಸಂದೆ, ಹೀರೆಕಾಯಿ, ಟೊಮ್ಯಾಟೋ, ಬದನೆ, ಕಪ್ಪು ಬದನೆ, ಸೋರೆಕಾಯಿ, ಚಪ್ಪರದ ಅವರೇಕಾಯಿ ಬೆಳೆಯುತ್ತಾರೆ.

  MORE
  GALLERIES

 • 77

  Success Story: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ

  ಬೇರೆಯವರ ಒಂದು ಎಕರೆ ಜಮೀನಿನಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಒಮ್ಮೆ ತರಕಾರಿ ಬೆಳೆ ಬೆಳೆದರೆ 45 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಒಮ್ಮೆ ಮೂರು ರೀತಿಯ ತರಕಾರಿ ಬೆಳೆಯುತ್ತಿದ್ದಾರೆ. ತರಕಾರಿ ಬೆಳೆಗೆ ಒಂದು ಲಕ್ಷದವರೆಗೆ ಖರ್ಚು ಮಾಡಿದರೆ 3 ಲಕ್ಷದವರೆಗೆ ಆದಾಯ ಬರಲಿದೆ ಎಂದು ರೈತ ಮಲ್ಲೇಶ್ ತಿಳಿಸಿದ್ದಾರೆ.

  MORE
  GALLERIES