ಅನೇಕ ಬಾರಿ ಜನರು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಿಗದಿತ ದಿನಾಂಕದಂದು ಪಾವತಿಸಲು ಮರೆತುಬಿಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕ್ರೆಡಿಟ್ ಸ್ಕೋರ್ ಕೂಡ ಕಡಿಮೆಯಾಗುತ್ತೆ. ಆದಾಗ್ಯೂ, ನಿಗದಿತ ದಿನಾಂಕದ ನಂತರವೂ, ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ದಂಡವಿಲ್ಲದೆ ಪಾವತಿಸುವ ಸೌಲಭ್ಯದ ಬಗ್ಗೆ ನಿಮಗೆ ಗೊತ್ತಿದ್ಯಾ?ಈ ಬಗ್ಗೆ ಆರ್‌ಬಿಐ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. (ಸಾಂಕೇತಿಕ ಚಿತ್ರ)
ಈ ನಿಯಮದ ಪ್ರಕಾರ, ಕ್ರೆಡಿಟ್ ಕಾರ್ಡ್ ಹೊಂದಿರುವವರು ನಿಗದಿತ ದಿನಾಂಕದ ನಂತರ 3 ದಿನಗಳವರೆಗೆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ದಂಡವಿಲ್ಲದೆ ಪಾವತಿಸಬಹುದು. ಅಂದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಿಗದಿತ ದಿನಾಂಕದಂದು ಪಾವತಿಸಲು ನೀವು ಮರೆತರೆ, ನೀವು ಹೆಚ್ಚುವರಿ ಹಣವನ್ನು ಪಾವತಿಸದೆ ಮುಂದಿನ ಮೂರು ದಿನಗಳಲ್ಲಿ ಬಿಲ್ ಅನ್ನು ಪಾವತಿಸಬಹುದು.(ಸಾಂಕೇತಿಕ ಚಿತ್ರ)