ಇಂಡೋನೇಷ್ಯಾ ವಾರ್ಷಿಕವಾಗಿ 46 ಮಿಲಿಯನ್ ಟನ್ ತಾಳೆ ಎಣ್ಣೆಯನ್ನು ಉತ್ಪಾದಿಸುತ್ತದೆ. ಇದು ತನ್ನ ಆಹಾರದ ಅಗತ್ಯಗಳಿಗಾಗಿ 9 ಮಿಲಿಯನ್ ಟನ್ಗಳನ್ನು ಬಳಸುತ್ತದೆ, ಇನ್ನೂ 9 ಮಿಲಿಯನ್ ಟನ್ಗಳನ್ನು ಜೈವಿಕ ಡೀಸೆಲ್ ಯೋಜನೆಗೆ ಬಳಸುತ್ತದೆ ಮತ್ತು ಉಳಿದ 28 ಮಿಲಿಯನ್ ಟನ್ಗಳನ್ನು ರಫ್ತು ಮಾಡುತ್ತದೆ. ಇಂಡೋನೇಷ್ಯಾ ಏಪ್ರಿಲ್ 28 ರಿಂದ ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧ ಹೇರಿದ್ದರಿಂದ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅಡುಗೆ ಎಣ್ಣೆಗಳ ಬೆಲೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
ರಷ್ಯಾ ಯುದ್ಧಕ್ಕೂ ಮುನ್ನ ಭಾರತದ ಸೂರ್ಯಕಾಂತಿ ಎಣ್ಣೆಯ ಮಾಸಿಕ ಬಳಕೆ 2 ಲಕ್ಷ ಟನ್ಗಳಷ್ಟಿತ್ತು. ಪೂರೈಕೆ ಕ್ಷೀಣಿಸಿದ ಕಾರಣ ಇಲ್ಲಿ ಬಳಕೆಯೂ ಕಡಿಮೆಯಾಗಿದೆ. ಈಗ ಉಕ್ರೇನ್ನಿಂದ ತೈಲ ಪೂರೈಕೆಯು ಸ್ಥಿರವಾಗಿ ಹೆಚ್ಚುತ್ತಿದೆ. ಇದು ತಿಂಗಳಿಗೆ ಹೆಚ್ಚುವರಿ 20,000 ರಿಂದ 25,000 ಟನ್ ಸೂರ್ಯಕಾಂತಿ ಎಣ್ಣೆಯನ್ನು ಸೇರಿಸುವ ನಿರೀಕ್ಷೆಯಿದೆ. ಒಟ್ಟಾರೆ ಅಡುಗೆ ಎಣ್ಣೆ ಬೆಲೆ ನಿಯಂತ್ರಣಕ್ಕೆ ಬರುತ್ತಿದೆ. (ಸಾಂದರ್ಭಿಕ ಚಿತ್ರ)