Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

Nandini vs Amul: ಅಮುಲ್​ ಬರೋಕೆ ಬಿಡಲ್ಲ ಅಂತ ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ಅತ್ತ ಹಾವೇರಿಯಲ್ಲಿ ಮತ್ತೊಂದು ಸಂಚು ಮಾಡೋಕೆ ಗುಜರಾತ್​ ಸಿದ್ಧವಾಗಿದೆ. ಅದ್ಯಾವುದಪ್ಪಾ ಅಂತೀರಾ? ಅದೇ ಪುಷ್ಪ. ಇದೇನಪ್ಪಾ ಅಲ್ಲು ಅರ್ಜುನ್​ ಸಿನಿಮಾನಾ ಅಂತ ಕನ್ಫೂಸ್​ ಆಗ್ಬೇಡಿ.

First published:

 • 18

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  Amul vs Nandini: ಕನ್ನಡಿಗರು ಶಾಂತ ಸ್ವಭಾವದವರು. ಹಾಗಂತ ಎಲ್ಲದ್ದಕ್ಕೂ ಪ್ರತಿಕ್ರಿಯೆ ಮಾಡದೇ ಸುಮ್ಮನ್ನೆ ಕೂರುವವರಲ್ಲ ಕನ್ನಡಿಗರು. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಅಮುಲ್​ ಫೈಟ್​ ಜೋರಾಗಿದೆ. ರಾಜ್ಯದಲ್ಲಿ ಹೇಗಾದರೂ ಮಾಡಿ ನಂದಿನಿ ಎದುರು ಅಮುಲ್​ ಬ್ರ್ಯಾಂಡ್ ತಂದು ಗುನ್ನಾ ಇಡಬೇಕು ಅಂತ ಗುಜರಾತ್​ ಮಾಸ್ಟರ್​ ಪ್ಲ್ಯಾನ್ ಮಾಡಿಕೊಂಡಿತ್ತು.

  MORE
  GALLERIES

 • 28

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  ಆದರೆ ಇದಕ್ಕೆ ಕನ್ನಡಿಗರು ಡಿಚ್ಚಿ ಕೊಟ್ಟಿದ್ದರು. ನಾವು ಕುಡಿಯೋದೇ ನಮ್ಮ ನಂದಿನಿ ಹಾಲು ಅಂತ ಗುಜರಾತ್​ಗೆ ಟಾಂಗ್​ ಕೊಟ್ಟಿದ್ದಾರೆ. ಇಲ್ಲಿ ಯಾಕೆ ಅಮುಲ್ ಬರೋಕೆ ಇಷ್ಟು ಪ್ರಯತ್ನ ಪಡುತ್ತಿದೆ ಅಂದ್ರೆ ಅದು ಮಾರ್ಕೆಟ್​. ಕರ್ನಾಟಕ ಮಾರ್ಕೆಟ್​ ಗುಜರಾತ್​ ಮಾರ್ಕೆಟ್​ಗಿಂತ ಹೆಚ್ಚಿದೆ.

  MORE
  GALLERIES

 • 38

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  ಅಮುಲ್​ ಬರೋಕೆ ಬಿಡಲ್ಲ ಅಂತ ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ಅತ್ತ ಹಾವೇರಿಯಲ್ಲಿ ಮತ್ತೊಂದು ಸಂಚು ಮಾಡೋಕೆ ಗುಜರಾತ್​ ಸಿದ್ಧವಾಗಿದೆ. ಅದ್ಯಾವುದಪ್ಪಾ ಅಂತೀರಾ? ಅದೇ ಪುಷ್ಪ. ಇದೇನಪ್ಪಾ ಅಲ್ಲು ಅರ್ಜುನ್​ ಸಿನಿಮಾನಾ ಅಂತ ಕನ್ಫೂಸ್​ ಆಗ್ಬೇಡಿ.

  MORE
  GALLERIES

 • 48

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  ಪುಷ್ಪ ಅಂದ್ರೆ ಗುಜರಾತ್​ನ ಮೆಣಸಿನಕಾಯಿ. ಬ್ಯಾಡಗಿ ಮೆಣಸಿನಕಾಯಿಗೆ ಟಾಂಗ್ ಕೊಡೋಕೆ ಪುಷ್ಪ ಮೆಣಸಿನಕಾಯಿ ಕಾಲಿಟ್ಟಿದೆ.ಅಮುಲ್ ಹಾಲಿನ ನಂತರ ಇದೀಗ ಗುಜರಾತ್ ಮೆಣಸಿನಕಾಯಿ ಸರದಿ. ಗುಜರಾತಿ ಮೆಣಸಿನಕಾಯಿಯ 'ಪುಷ್' ಹವಾ ಜೋರಾಗಿದೆ. ಏಷ್ಯಾದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಬ್ಯಾಡಗಿಯಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ.

  MORE
  GALLERIES

 • 58

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  ಮೂಲಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಕನಿಷ್ಠ 20,000 ಕ್ವಿಂಟಲ್ ಗುಜರಾತಿ ಮೆಣಸಿನಕಾಯಿ ಮಾರಾಟವಾಗಿದೆ. ಪುಷ್ಪ ಸ್ಥಳೀಯ ಡಬ್ಬಿ ಮತ್ತು ಕಡ್ಡಿ ತಳಿಗಳಿಗೆ ಪ್ರತಿಸ್ಪರ್ಧಿಯಲ್ಲದಿದ್ದರೂ, ಗುಜರಾತ್ ತಳಿಯ ದೊಡ್ಡ ಪ್ರಮಾಣದ ಸ್ಥಳೀಯ ಮಾರುಕಟ್ಟೆಯನ್ನು ತಲುಪಿದೆ.

  MORE
  GALLERIES

 • 68

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  ಪುಷ್ಪ ಮೆಣಸಿನಕಾಯಿಗಳು ಸ್ಥಳೀಯ ತಳಿಗಳಿಗಿಂತ ಕೆಂಪಾಗಿ ಕಾಣುತ್ತವೆ. ಕನಿಷ್ಠ 70 ಮೆಣಸಿನಕಾಯಿ ಮಾರಾಟಗಾರರು ಮಾರುಕಟ್ಟೆಯ ಸಮೀಪವಿರುವ ವಿವಿಧ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಗುಜರಾತ್ ಮೆಣಸಿನಕಾಯಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ ಎಂದು ಬ್ಯಾಡಗಿ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

  MORE
  GALLERIES

 • 78

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  ಬ್ಯಾಡಗಿಯಲ್ಲಿ ಏಕಾಏಕಿ ಬೆಲೆ ಏರಿಕೆಯ ಲಾಭವನ್ನು ಪಡೆದುಕೊಂಡು ಗುಜರಾತ್ ಮೆಣಸಿನಕಾಯಿ ಭರ್ಜರಿ ವ್ಯಾಪಾರ ಕಂಡಿದೆ. ವಿವಿಧ ದೇಶಗಳು ಮತ್ತು ಕಂಪನಿಗಳು ವರ್ಷಗಳಿಂದ ಬ್ಯಾಡಗಿ ಮೆಣಸಿನಕಾಯಿಯನ್ನು ಅವಲಂಬಿಸಿವೆ.

  MORE
  GALLERIES

 • 88

  Karnataka vs Gujarat: ಅಮುಲ್ ಆಯ್ತು ಈಗ 'ಪುಷ್ಪ'ನ ಸರದಿ, ಗುನ್ನಾ ಕೊಡೋಕೆ ಬಂದ ಗುಜರಾತ್​ಗೆ ಕನ್ನಡಿಗರ ಡಿಚ್ಚಿ!

  ಆದ್ದರಿಂದ ಈ ಸ್ಥಳೀಯ ಮೆಣಸಿನಕಾಯಿಯ ಖ್ಯಾತಿಗೆ ಧಕ್ಕೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ರೈತರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  MORE
  GALLERIES