Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

Savings Scheme: ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ನಿಯಮ ನೀವು ತಿಳಿಯದಿದ್ದರೆ ಸಂಕಷ್ಟಕ್ಕೆ ಒಳಗಾಗಬಹುದು.

First published:

  • 18

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಂತಹ ಉಳಿತಾಯ ಯೋಜನೆಗಳಲ್ಲಿ ಇರುವವರು ಈ ವಿಚಾರವೊಂದನ್ನು ತಿಳಿದುಕೊಂಡಿರಲೇಬೇಕು. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಉಳಿಸಲು ಪ್ಯಾನ್ ಕಾರ್ಡ್ ಮತ್ತು ಆಧಾರ್ ಸಂಖ್ಯೆ ಈಗ ಕಡ್ಡಾಯವಾಗಿದೆ. ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 31, 2023 ರಂದು ಈ ಹೊಸ ನಿಯಮವನ್ನು ಪ್ರಕಟಿಸುವ ಅಧಿಸೂಚನೆಯನ್ನು ಹೊರಡಿಸಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 28

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಸಣ್ಣ ಮೊತ್ತದ ಉಳಿತಾಯ ಯೋಜನೆಗಳಿಗೆ KYC ನಿಯಮಗಳ ಭಾಗವಾಗಿ ಕೇಂದ್ರ ಸರ್ಕಾರವು ಈ ಬದಲಾವಣೆಗಳನ್ನು ಮಾಡಿದೆ. ಈ ಎಲ್ಲಾ ವರ್ಷಗಳಲ್ಲಿ ಈ ಯೋಜನೆಗಳಿಗೆ ಸೇರಲು ಆಧಾರ್ ಸಂಖ್ಯೆ ಕಡ್ಡಾಯವಾಗಿರಲಿಲ್ಲ. ಆದರೆ ಇನ್ನು ಮುಂದೆ ಆಧಾರ್ ಸಂಖ್ಯೆ ಅಥವಾ ಆಧಾರ್ ನೋಂದಣಿ ಸಂಖ್ಯೆ ಕಡ್ಡಾಯವಾಗಿದೆ.

    MORE
    GALLERIES

  • 38

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಈ ಉಳಿತಾಯ ಯೋಜನೆಗಳಲ್ಲಿ ಹಣ ಉಳಿಸಲು ಇನ್ನು ಮುಂದೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ. ಸರ್ಕಾರ ನಿಗದಿಪಡಿಸಿದ ಮಿತಿ ಮೀರಿ ಹಣ ಇಡಲು ಪ್ಯಾನ್ ಕಾರ್ಡ್ ಕೂಡ ಕಡ್ಡಾಯವಾಗಿದೆ. ಈ ಯೋಜನೆಗಳಲ್ಲಿ ನೀವು ಸರ್ಕಾರ ವಿಧಿಸಿರುವ ಮಿತಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದ್ದರೆ, ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಬೇಕು. ಪ್ಯಾನ್ ಕಾರ್ಡ್ ಇಲ್ಲದಿರುವವರು ಪ್ಯಾನ್ ಕಾರ್ಡ್ ತೆಗೆದುಕೊಳ್ಳಲೇಬೇಕು. ಆಗ ಮಾತ್ರ ನಾವು ಈ ಯೋಜನೆಗಳಲ್ಲಿ ಮುಂದುವರಿಯಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 48

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಸಣ್ಣ ಉಳಿತಾಯ ಯೋಜನೆಗಳಲ್ಲಿರುವ ಎಲ್ಲರೂ ತಮ್ಮ ಆಧಾರ್ ಸಂಖ್ಯೆಯನ್ನು 30 ಸೆಪ್ಟೆಂಬರ್ 2023 ರೊಳಗೆ ಸಲ್ಲಿಸಬೇಕು. ಆದರೆ, ಪಿಪಿಎಸ್, ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಂತಹ ಸಣ್ಣ ಮೊತ್ತಕ್ಕೆ ಉಳಿತಾಯ ಖಾತೆ ತೆರೆಯುವಾಗ ಆಧಾರ್ ಸಂಖ್ಯೆಯನ್ನು ನೀಡಿದರೆ ಮತ್ತೆ ಪ್ಯಾನ್​ ಸಲ್ಲಿಸುವ ಅಗತ್ಯವಿಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 58

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಇನ್ನುಮುಂದೆ, ಈ ಯಾವುದೇ ಉಳಿತಾಯ ಯೋಜನೆಗಳಲ್ಲಿ ನೋಂದಾಯಿಸಲು ಬಯಸುವವರು ತಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು. ಆಧಾರ್ ಸಂಖ್ಯೆ ಇಲ್ಲದೆ ಖಾತೆ ತೆರೆಯುವ ಸಂದರ್ಭದಲ್ಲಿ, ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ಸಂಖ್ಯೆಯನ್ನು ಒದಗಿಸಬೇಕು. ಅಲ್ಲದೆ ಆಧಾರ್ ಸಂಖ್ಯೆ ನೀಡದೇ ಇರುವವರು ಆಧಾರ್ ನೋಂದಣಿ ಸಂಖ್ಯೆಯನ್ನು ನೀಡಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 68

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಎರಡು ತಿಂಗಳೊಳಗೆ ಪ್ಯಾನ್ ಸಂಖ್ಯೆಯನ್ನು ಸಲ್ಲಿಸದಿದ್ದರೆ, ಪ್ಯಾನ್ ಸಂಖ್ಯೆಯನ್ನು ಒದಗಿಸುವವರೆಗೆ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 78

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಆದಾಗ್ಯೂ, ಸಣ್ಣ ಉಳಿತಾಯ ಯೋಜನೆ ಖಾತೆಯನ್ನು ತೆರೆಯುವ ಸಮಯದಲ್ಲಿ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಿದರೆ, ಮತ್ತೆ ಪ್ಯಾನ್ ಸಂಖ್ಯೆಯನ್ನು ನೀಡುವ ಅಗತ್ಯವಿಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 88

    Savings Schemes ಗೆ ಸೇರುವವರಿಗೆ ಎಚ್ಚರಿಕೆ! ಈ ಹೊಸ ನಿಯಮ ತಿಳಿಯದಿದ್ದರೆ ಸಂಕಷ್ಟ!

    ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿದೆ. ಮುಂದಿನ ಮೂರು ತಿಂಗಳ ಬಡ್ಡಿದರಗಳನ್ನು ಮಾರ್ಚ್ 31, 2023 ರಂದು ಘೋಷಿಸಲಾಯಿತು. ಹೊಸ ಬಡ್ಡಿ ದರಗಳು 2023-24ರ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಅನ್ವಯಿಸುತ್ತವೆ. (ಸಾಂಕೇತಿಕ ಚಿತ್ರ)

    MORE
    GALLERIES