ಈಗಂತೂ ದೇಶದಲ್ಲಿ ಬಹುತೇಕರು ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಂಡಿರುತ್ತಾರೆ. ಈಗ ಇದು ಎಲ್ಲರೂ ತಪ್ಪದೆ, ಖಡ್ಡಾಯವಾಗಿ ಮಾಡಿಸಿಕೊಳ್ಳಬೇಕಾದ ಗುರುತಿನ ಕಾರ್ಡ್ ಆಗಿದೆ. ಈ ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯ ಹೆಸರು, ಜನ್ಮ ದಿನಾಂಕ, ಮೊಬೈಲ್ ಫೋನ್ ಸಂಖ್ಯೆ, ಮನೆಯ ವಿಳಾಸ ಹೀಗೆ ಏನಾದರೂ ಒಂದು ವಿವರ ಬದಲಾದರೂ ಸಹ ಅವುಗಳನ್ನು ಕೂಡಲೇ ಅಪ್ಡೇಟ್ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.
ಉಚಿತ ಯುಐಡಿಎಐ ಸೇವೆಯನ್ನು ಮೈ ಆಧಾರ್ ಪೋರ್ಟಲ್ ನಲ್ಲಿ ಎಂದರೆ ಆನ್ಲೈನ್ ನಲ್ಲಿ ಮಾತ್ರ ಪಡೆಯಬಹುದು. ಭೌತಿಕ ಆಧಾರ್ ಕೇಂದ್ರಗಳಲ್ಲಿ ದಾಖಲೆಗಳನ್ನು ಅಪ್ಡೇಟ್ ಮಾಡಲು, ಕಾರ್ಡ್ ಹೊಂದಿರುವವರು ಇನ್ನೂ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಕ್ರಮವು ಸುಧಾರಿತ ಸುಗಮ ಜೀವನ, ಉತ್ತಮ ಸೇವಾ ವಿತರಣೆ ಮತ್ತು ದೃಢೀಕರಣ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಈ ಮೂರು ತಿಂಗಳುಗಳ ಕಾಲ ಶುರು ಮಾಡಿದ ವಿಂಡೋದ ಉದ್ದೇಶವಾಗಿದೆ.
ಆನ್ಲೈನ್ನಲ್ಲಿ ಅಪ್ಡೇಟ್ ಮಾಡೋದು ಹೇಗೆ?: ಮೊದಲಿಗೆ ಯುಐಡಿಎಐನ ಅಧಿಕೃತ ವೆಬ್‌ಸೈಟ್ ಗೆ ಹೋಗಿ. ನಂತರ 'ಮೈ ಆಧಾರ್' ಮೆನುಗೆ ಹೋಗಿ. ಅಲ್ಲಿ ‘ಅಪ್ಡೇಟ್ ಯುವರ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ 'ಅಪ್ಡೇಟ್ ಡೆಮೋಗ್ರಾಫಿಕ್ ಡೇಟಾ ಆನ್ಲೈನ್’ ಆಯ್ಕೆಯನ್ನು ಕ್ಲಿಕ್ ಮಾಡಿ. 'ಪ್ರೋಸಿಡ್ ಟು ಅಪ್ಡೇಟ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ನಂತರ ಅಲ್ಲಿ ಕ್ಯಾಪ್ಚಾ ಪರಿಶೀಲನೆ ಮಾಡಿ.
ಇದಾದ ನಂತರ 'ಸೆಂಡ್ ಒಟಿಪಿ’ ಆಯ್ಕೆಯನ್ನು ಒತ್ತಿರಿ. 'ಅಪ್ಡೇಟ್ ಡೆಮೋಗ್ರಾಫಿಕ್ಸ್ ಡೇಟಾ’ ಆಯ್ಕೆಯನ್ನು ಕ್ಲಿಕ್ ಮಾಡಿ. ‘ಅಪ್ಶನ್ ಆಫ್ ಡಿಟೇಲ್’ ಅನ್ನು ಅಪ್ಡೇಟ್ ಮಾಡುವುದಕ್ಕೆ ಆಯ್ಕೆ ಮಾಡಿ. ಹೊಸ ವಿವರಗಳನ್ನು ಅಲ್ಲಿ ನಮೂದಿಸಿ. ಬೆಂಬಲಿತ ಡಾಕ್ಯುಮೆಂಟ್ ಪ್ರೂಫ್ ನ ಸ್ಕ್ಯಾನ್ ಮಾಡಿದ ನಕಲನ್ನು ಅಲ್ಲಿ ಅಪ್ಲೋಡ್ ಮಾಡಿ. ನಮೂದಿಸಿದ ಮಾಹಿತಿಯು ನಿಖರವಾಗಿದೆ ಎಂದು ಪರಿಶೀಲಿಸಿ. ಅದನ್ನು ಒಟಿಪಿ ಯೊಂದಿಗೆ ಮೌಲ್ಯೀಕರಿಸಿ..