ಸಾಮಾನ್ಯವಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.3 ಅಥವಾ ಶೇ.4 ರಷ್ಟು ಹೆಚ್ಚಿಸಲಾಗುತ್ತದೆ. ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ಡಿಎಯನ್ನು ಹೆಚ್ಚಿಸುತ್ತದೆ. ಪ್ರತಿ ವರ್ಷ ಜನವರಿಯಲ್ಲಿ ಮತ್ತು ಜುಲೈನಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಲಾಗುತ್ತದೆ. ಈ ವರ್ಷ ಜುಲೈನಲ್ಲಿ ಡಿಎ ಏರಿಕೆಯಾಗಲಿದೆ. ಈ ಬಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಶೇ.5ರಷ್ಟು ಹೆಚ್ಚಳವಾಗಲಿದೆ ಎಂಬ ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
ಡಿಎ ಹೆಚ್ಚಳ ಮಾಡುವಾಗ ಕೇಂದ್ರ ಸರ್ಕಾರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಡೇಟಾವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಡೇಟಾ ಉದ್ಯೋಗಿಗಳ ಡಿಎ ಹೆಚ್ಚಳವನ್ನು ನಿರ್ಧರಿಸುತ್ತದೆ. ಈ ಅಂಕಿಅಂಶಗಳ ಪ್ರಕಾರ, ಡಿಎ ವರ್ಷಕ್ಕೆ ಕೇವಲ 3 ಪ್ರತಿಶತ ಅಥವಾ 4 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಕಳೆದ ಬಾರಿ ಶೇ.3ರಷ್ಟು ಡಿಎ ಹೆಚ್ಚಿಸಲಾಗಿತ್ತು. ಇದರಿಂದ ಡಿಎ ಶೇ.34 ರಿಂದ ಶೇ.34ಕ್ಕೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
ಇತ್ತೀಚಿನ AICPI ದತ್ತಾಂಶವನ್ನು ಆಧರಿಸಿ, ಉದ್ಯೋಗಿಗಳಿಗೆ DA ಈ ಬಾರಿ 5% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಎಐಸಿಪಿಐ ಅಂಕಿಅಂಶಗಳನ್ನು ಗಮನಿಸಿದರೆ, ಜನವರಿಯಲ್ಲಿ 125.1 ಅಂಕಗಳಿಷ್ಟಿತ್ತು. ಫೆಬ್ರವರಿಯಲ್ಲಿ 125 ಅಂಕಗಳು, ಮಾರ್ಚ್ ನಲ್ಲಿ 126 ಅಂಕಗಳು ಮತ್ತು ಏಪ್ರಿಲ್‌ನಲ್ಲಿ 127.7 ಅಂಕಗಳಿತ್ತು. ಹಣದುಬ್ಬರದಿಂದಾಗಿ ಎಐಸಿಪಿಐ ಅಂಕಿಅಂಶಗಳು ಹೆಚ್ಚುತ್ತಿವೆ. ಇದರ ಪರಿಣಾಮವಾಗಿ ಉದ್ಯೋಗಿಗಳು ಹೆಚ್ಚುವರಿ ಡಿಎ ಪಡೆಯುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)