1. ಕೇಂದ್ರ ಸರ್ಕಾರವು ನೌಕರರು ಮತ್ತು ಪಿಂಚಣಿದಾರರಿಗೆ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುತ್ತಿದೆ. ಈ ಆಯೋಗದ ಶಿಫಾರಸಿನ ಪ್ರಕಾರ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಮೊದಲು ಆರನೇ ವೇತನ ಆಯೋಗವಿತ್ತು. ಇದೀಗ ಮತ್ತೊಂದು ಸುದ್ದಿ ಏನಪ್ಪಾ ಅಂದ್ರೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಏಳನೇ ವೇತನ ಆಯೋಗವನ್ನು ಎಂಟನೇ ವೇತನ ಆಯೋಗದೊಂದಿಗೆ ಬದಲಾಯಿಸಲಿದೆ. (ಸಾಂಕೇತಿಕ ಚಿತ್ರ)
2. ಎಂಟನೇ ವೇತನ ಆಯೋಗ ರಚನೆಗೆ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರವು 2023 ರ ಕೇಂದ್ರ ಬಜೆಟ್‌ನಲ್ಲಿಯೇ ಎಂಟನೇ ವೇತನ ಆಯೋಗವನ್ನು ಬದಲಾಯಿಸಲಿದೆ ಎಂಬ ವರದಿಗಳಿವೆ. ಆದರೆ ಫೆಬ್ರವರಿ 1 ರಂದು ಮಂಡಿಸಿದ ಬಜೆಟ್‌ನಲ್ಲಿ ಎಂಟನೇ ವೇತನ ಆಯೋಗದ ಬಗ್ಗೆ ಯಾವುದೇ ಘೋಷಣೆ ಇರಲಿಲ್ಲ. ಇದರಿಂದ ನೌಕರರು ನಿರಾಸೆಗೊಂಡರು. (ಸಾಂಕೇತಿಕ ಚಿತ್ರ)
3. ಸಾಮಾನ್ಯವಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗದ ನಿಯಮಗಳು ಬದಲಾಗುತ್ತವೆ. 5ನೇ ವೇತನ ಆಯೋಗ, 6ನೇ ವೇತನ ಆಯೋಗ ಮತ್ತು 7ನೇ ವೇತನ ಆಯೋಗಕ್ಕೂ ಇದೇ ವಿಧಾನವನ್ನು ಅನುಸರಿಸಲಾಗಿದೆ. ಏಳನೇ ವೇತನ ಆಯೋಗವನ್ನು 2014 ರಲ್ಲಿ ಸ್ಥಾಪಿಸಲಾಯಿತು. ಅಂದರೆ 9 ವರ್ಷಗಳು ಕಳೆದಿವೆ. ಇದು 2024 ರ ವೇಳೆಗೆ 10 ವರ್ಷಗಳನ್ನು ಪೂರೈಸುತ್ತದೆ. (ಸಾಂಕೇತಿಕ ಚಿತ್ರ)
6. ಈ 7 ನೇ ವೇತನ ಆಯೋಗದ ಸ್ಥಳದಲ್ಲಿ 8 ನೇ ವೇತನ ಆಯೋಗದ ಘೋಷಣೆಯು 2024 ರ ಅಂತ್ಯದ ವೇಳೆಗೆ ಬರಬಹುದು. ಈ ಶಿಫಾರಸುಗಳನ್ನು 2026 ರ ವೇಳೆಗೆ ಜಾರಿಗೊಳಿಸಲಾಗುವುದು. 8 ನೇ ವೇತನ ಆಯೋಗವು ಬೃಹತ್ ವೇತನ ಹೆಚ್ಚಳ, ಮೂಲ ವೇತನದಲ್ಲಿ ಹೆಚ್ಚಳ, ಫಿಟ್‌ಮೆಂಟ್ ಅಂಶ ಮತ್ತು ಸರ್ಕಾರಿ ನೌಕರರಿಗೆ ಕಡಿಮೆಯಿಂದ ಅತ್ಯಧಿಕ ವೇತನ ಶ್ರೇಣಿಯವರೆಗೆ ಭತ್ಯೆಗಳ ಕುರಿತು ಶಿಫಾರಸುಗಳನ್ನು ಮಾಡುತ್ತದೆ. (ಸಾಂಕೇತಿಕ ಚಿತ್ರ)
7. ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಜನವರಿಯಲ್ಲಿ ಒಮ್ಮೆ ಮತ್ತು ಜುಲೈನಲ್ಲಿ ಮತ್ತೊಮ್ಮೆ ಡಿಎ ಹೆಚ್ಚಿಸಲಾಗುವುದು. ಜನವರಿ 2023 ರ ಡಿಎ ಇನ್ನೂ ಹೆಚ್ಚಿಲ್ಲ. ಹೋಳಿ ಹಬ್ಬದ ಕೊಡುಗೆಯಾಗಿ ಡಿಎ ಹೆಚ್ಚಿಸುವ ನಿರೀಕ್ಷೆ ಇತ್ತು, ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಘೋಷಣೆ ಬಂದಿಲ್ಲ. ಈ ತಿಂಗಳ ಅಂತ್ಯದೊಳಗೆ ಡಿಎ ಹೆಚ್ಚಳದ ಕುರಿತು ಘೋಷಣೆಯಾಗುವ ನಿರೀಕ್ಷೆಯಿದೆ. (ಸಾಂಕೇತಿಕ ಚಿತ್ರ)