ಅಗತ್ಯ ಪೂರೈಕೆಗಳು: ನಿಯಮಿತ ನೀರು ಸರಬರಾಜು, ವಿದ್ಯುತ್, ಪಾರ್ಕಿಂಗ್, ನೈರ್ಮಲ್ಯ ಸೇವೆಗಳು ಮುಂತಾದ ಅಗತ್ಯ ಸೇವೆಗಳು ನಿಮ್ಮ ಮೂಲಭೂತ ಹಕ್ಕುಗಳಾಗಿವೆ. ನೀವು ಈ ಮೂಲಭೂತ ಸೌಲಭ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮಾಲೀಕರ ಜವಾಬ್ದಾರಿಯಾಗಿದೆ. ಒಂದು ವೇಳೆ ಮೂಲಭೂತ ಅವಶ್ಯಕತೆಯನ್ನು ಮಾಲೀಕರು ತಡೆಹಿಡಿದರೆ, ಸ್ಥಳೀಯ ಪ್ರಾಧಿಕಾರವು ಮಧ್ಯಪ್ರವೇಶಿಸಿ ವಿಚಾರಣೆಯನ್ನು ಪ್ರಾರಂಭಿಸಬಹುದು. ಅಲ್ಲದೆ, ಪ್ರಾಧಿಕಾರವು ಹಾನಿಗೊಳಗಾದ ಪಕ್ಷಕ್ಕೆ ದಂಡ ಮತ್ತು ಪರಿಹಾರವನ್ನು ವಿಧಿಸಬಹುದು.
ಹೇಳದೇ ಕೇಳದೇ ಹೊರಗೆ ಕಳಿಸುವಂತಿಲ್ಲ: ಭೂಮಾಲೀಕರು ನಿಮಗೆ ಪೂರ್ವ ಸೂಚನೆ ಹಾಗೂ ನಿರ್ದಿಷ್ಟ ಕಾರಣವನ್ನು ನೀಡದೆ ಆವರಣವನ್ನು ಖಾಲಿ ಮಾಡಲು ನಿಮ್ಮನ್ನು ಕೇಳುವಂತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಸೂಚನೆಯ ಅವಧಿಯು 15 ದಿನಗಳಿಂದ 2 ತಿಂಗಳವರೆಗೆ ಇರುತ್ತದೆ. ಬಾಡಿಗೆದಾರರು ನಿಗದಿತ ಸಮಯದೊಳಗೆ ಕಟ್ಟಡವನ್ನು ಖಾಲಿ ಮಾಡಲು ವಿಫಲವಾದರೆ, ಪರಿಹಾರವಾಗಿ ಮಾಸಿಕ ಬಾಡಿಗೆಯನ್ನು ದ್ವಿಗುಣಗೊಳಿಸಲು ಮಾಲೀಕರು ಅರ್ಹರಾಗಿರುತ್ತಾರೆ.