ಹೆಚ್ಚು ಶ್ರಮವಹಿಸಿ ದುಡಿದರೆ ಮಾತ್ರ ಕೈತುಂಬಾ ಹಣ ಸಂಪಾದಿಸಬಹುದು ಎಂಬುದು ಹಳೆಯ ಮಾತಾಯಿತು. ಏಕೆಂದರೆ ಇಂದಿನ ದಿನಗಳಲ್ಲಿ ತಂತ್ರಜ್ಞಾನ ಅಪ್‌ಡೇಟ್ ಆದಂತೆ ಮನುಷ್ಯರೂ ಅಪ್‌ಡೇಟ್ ಆಗುತ್ತಿದ್ದಾರೆ ಹಾಗಾಗಿಯೇ ಹೆಚ್ಚಿನ ಪರಿಶ್ರಮ ಹಾಕದೆಯೇ ಕುಳಿತಲ್ಲೇ ಹಣ ಗಳಿಸುವ ಹಲವಾರು ವಿಧಾನಗಳನ್ನು ಅನ್ವೇಷಿಸುತ್ತಿದ್ದಾರೆ. ಒಂದು ಗಂಟೆಗಳ ಕಾಲ ಕೂಡ ಶ್ರಮಹಾಕದೆಯೇ ಹಣ ಸಂಪಾದಿಸಬಹುದಾದ ಹಲವಾರು ದಾರಿಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಕ್ಲೌಡ್ ಮೈನಿಂಗ್: ಕ್ರಿಪ್ಟೋಕರೆನ್ಸಿ ಅಪ್‌ಡೇಟ್ ಆದಂತೆ ಇದರಿಂದ ಹಣ ಸಂಪಾದಿಸುವ ಕೌಶಲ್ಯ ನಿರತರು ಹೆಚ್ಚಾಗಿದ್ದಾರೆ. ಕ್ಲೌಡ್ ಮೈನಿಂಗ್ ಕ್ರಿಪ್ಟೋಕರೆನ್ಸಿಯಲ್ಲಿ ಹಣ ಸಂಪಾದಿಸಬಹುದು. ಹ್ಯಾಪಿಮೈನರ್ ಎಂಬುದು ಕ್ಲೌಡ್ ಮೈನಿಂಗ್ ವೆಬ್‌ಸೈಟ್‌ಗಳಲ್ಲಿ ಒಂದೆನಿಸಿದೆ. ಹ್ಯಾಪಿಮೈನರ್ ಮೂಲಕ ಬಿಟ್‌ಕಾಯಿನ್, ಡ್ಯಾಶ್‌ಕಾಯಿನ್, ಲಿಟ್‌ಕಾಯಿನ್, ಡಾಗ್‌ಕಾಯಿನ್, ಫೈಲ್‌ಕಾಯಿನ್ ಮತ್ತು ಇನ್ನೂ ಅನೇಕ ಇತರ ಕ್ರಿಪ್ಟೋಕರೆನ್ಸಿಗಳಲ್ಲಿ ಮೈನಿಂಗ್ ಮಾಡಬಹುದು. ಇದರಲ್ಲಿ ಸೈನ್ ಅಪ್ ಬೋನಸ್ ಕೂಡ ಲಭ್ಯವಿದ್ದು ದಿನಂಪ್ರತಿ ಪಾವತಿ ಗಳಿಸಬಹುದಾಗಿದೆ ಅಂತೆಯೇ 4.5% ದಷ್ಟು ಕಮೀಷನ್ ಕೂಡ ಸಂಪಾದಿಸಬಹುದು.
ನಿಮ್ಮದೇ ವೆಬ್‌ಸೈಟ್ ಸ್ಥಾಪನೆ: ನಿಮ್ಮದೇ ಆದ ಬ್ಲಾಗ್ ಅಥವಾ ವೆಬ್ ಸೈಟ್ ನಿರ್ಮಿಸಿಕೊಂಡು ಅದರಿಂದಲೂ ಹಣ ಸಂಪಾದಿಸಬಹುದು. ಆದರೆ ನಿಮ್ಮ ಸೈಟಿಗೆ ಸಾಕಷ್ಟು ಜನರು ಭೇಟಿ ನೀಡುವಂತಾಗಬೇಕು ಅಷ್ಟೇ. ಅದಕ್ಕಾಗಿನಿಮ್ಮ ಸ್ಥಾನವೇನು ಹಾಗೂ ಹೆಚ್ಚು ಜನಪ್ರಿಯವಾಗಿರುವ ವಿಷಯ ಆಯ್ಕೆಮಾಡುವುದು ಆದ್ಯತೆಯಾಗಿರಲಿ. ಇದನ್ನು ಸಾಧಿಸಲು ನಿಮ್ಮ ಆದ್ಯತೆಯ ಕೀವರ್ಡ್ ಸಂಶೋಧನಾ ಪ್ರೋಗ್ರಾಂ ಅಥವಾ Google ನಲ್ಲಿ ಕೀವರ್ಡ್ ಪ್ಲಾನರ್ ಅನ್ನು ಬಳಸಿ.
ಓದುಗರಿಗೆ ಆಕರ್ಷಣೆಯನ್ನುಂಟು ಮಾಡುವ ಟಾಪಿಕ್‌ಗಳನ್ನು ಆಯ್ದುಕೊಳ್ಳಿ ಅಂತೆಯೇ ಹೆಚ್ಚು ವಿವಾದಿತ ಸುದ್ದಿಗಳನ್ನು ಆಯ್ದುಕೊಳ್ಳದಿರಿ. ಕೊನೆಯದಾಗಿ, ವಿಷಯಕ್ಕೆ ಸಾಕಷ್ಟು ಬೇಡಿಕೆಯಿದೆ ಎಂದು ಖಚಿತಪಡಿಸಿಕೊಳ್ಳಿ, ಕ್ಷೇತ್ರದಲ್ಲಿನ ತಜ್ಞರಿಂದ ಕೆಲವು ಸಂಬಂಧಿತ ಮಾಹಿತಿ ಅಥವಾ ಮಾರ್ಗದರ್ಶನದ ಅಗತ್ಯವನ್ನು ಗುರುತಿಸಿ, ಇದರಿಂದ ಅವರಿಗೆ ಮೌಲ್ಯವನ್ನು ಒದಗಿಸಬಹುದು ಮತ್ತು ಇತರರಿಗೆ ಸಹಾಯ ಮಾಡಬಹುದು.
ಯೂಟ್ಯೂಬ್ ನೆಚ್ಚಿನ ಇಂಟರ್ನೆಟ್ ಆದಾಯದ ಸ್ಟ್ರೀಮ್‌ಗಳಲ್ಲಿ ಒಂದೆನಿಸಿದೆ. ಪ್ರೇಕ್ಷಕರನ್ನು ಸೆಳೆಯುವ ಮತ್ತು ಟ್ರಾಫಿಕ್ ಹೆಚ್ಚಿಸಲು ಈ ತಾಣ ಸಹಕಾರಿ ಎಂದೆನಿಸಿದ್ದು ವೀಕ್ಷಕರನ್ನು ವಿಡಿಯೋಗಳತ್ತ ಆಕರ್ಷಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡರೆ ಕೈ ತುಂಬಾ ಹಣ ಸಂಪಾದಿಸಬಹುದಾಗಿದೆ. (ಇದರ ಬಗ್ಗೆ ನಂತರ), ಇದೀಗ ಎಷ್ಟೋ ಜನ ಗೃಹಿಣಿಯರು ವ್ಲಾಗ್‌ಗಳನ್ನು ನಿರ್ಮಿಸುವ ಮೂಲಕ ಮನೆಯಲ್ಲೇ ಹಣ ಸಂಪಾದಿಸುತ್ತಿದ್ದಾರೆ ಹಾಗೂ ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ.