ಭಾರತದಲ್ಲಿ ಪ್ರತಿ ವರ್ಷ ವಿಮಾನದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೈಗೆಟುಕುವ ವಿಮಾನ ದರಗಳು ಮತ್ತು ಸಣ್ಣ ನಗರಗಳಿಗೂ ಹೆಚ್ಚಿದ ಸಂಪರ್ಕದಿಂದಾಗಿ, ಅನೇಕರು ಫ್ಲೈಟ್ನಲ್ಲಿ ಪ್ರಯಾಣಿಸಲು ಇಚ್ಛಿಸುತ್ತಾರೆ. ಎರಡನೇ ಹಂತದ ನಗರಗಳಿಗೂ ವಿಮಾನ ಸೌಲಭ್ಯ ಸಿಗಲಿದೆ. ಹೀಗಾಗಿ ಭವಿಷ್ಯದಲ್ಲಿ ವಿಮಾನಯಾನ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುವ ಸಾಧ್ಯತೆಗಳಿವೆ.
ಹೈದರಾಬಾದ್ GMR ವಿಮಾನ ನಿಲ್ದಾಣ: ಹೈದರಾಬಾದ್‌ನ ಜಿಎಂಆರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ರ್ಯಾಂಕಿಂಗ್ನಲ್ಲಿ 63 ನೇ ಸ್ಥಾನದಲ್ಲಿದೆ. ಏವಿಯೇಷನ್ ಡೇಟಾ ಅನಾಲಿಟಿಕ್ಸ್ ಬ್ಯುಸಿನೆಸ್ ಸಿರಿಯಸ್‌ನ ವರದಿಯ ಪ್ರಕಾರ, 2022ರ ವೇಳೆಗೆ ವಿಮಾನ ನಿಲ್ದಾಣವು ವಿಶ್ವದ 4 ಅತ್ಯುತ್ತಮ ಸಮಯೋಚಿತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2022 ರಲ್ಲಿ ವಿಶ್ವದಾದ್ಯಂತದ ಟಾಪ್ 100 ವಿಮಾನ ನಿಲ್ದಾಣಗಳಲ್ಲಿ 65 ನೇ ಸ್ಥಾನವನ್ನು ಪಡೆದುಕೊಂಡಿದೆ.
ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ: ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಸತತ 12 ನೇ ಬಾರಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಸರು ಪಡೆದಿದೆ. ಕತಾರ್‌ನ ದೋಹಾದಲ್ಲಿರುವ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ರ್‍ಯಾಂಕಿಂಗ್ ಸಾಧಿಸಿದೆ ಮತ್ತು ಸತತ ಎರಡನೇ ವರ್ಷ ವಿಶ್ವದ ಎರಡನೇ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ. ಟೋಕಿಯೊದ ಹನೆಡಾ ವಿಮಾನ ನಿಲ್ದಾಣವು ಮೂರನೇ ಸ್ಥಾನದಲ್ಲಿದೆ ಮತ್ತು ಸಿಯೋಲ್‌ನ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಾಲ್ಕನೇ ಸ್ಥಾನದಲ್ಲಿದೆ.