ಹೈದರಾಬಾದ್ ಮೂಲದ ಸಂಕರ್ಷ್ ಚಂದಾ 17 ವರ್ಷದವರಾಗಿದ್ದಾಗ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು. ಈಗ ಕೇವಲ 23 ನೇ ವಯಸ್ಸಿನಲ್ಲಿ, ಸಂಕರ್ಷ್ ಮಾರುಕಟ್ಟೆಯಿಂದ 100 ಕೋಟಿ ರೂಪಾಯಿ ಗಳಿಸಿದ್ದಾರೆ ಅಂದ್ರೆ ನಂಬೋಕೆ ಕಷ್ಟವಾಗುತ್ತೆ. ಇದು ನಿಜವಾಗಿಯೂ ಆಶ್ಚರ್ಯಕರವಾಗಿದೆ, ಏಕೆಂದರೆ ಹೆಚ್ಚಿನ ಹೂಡಿಕೆದಾರರು ಮತ್ತು ವ್ಯಾಪಾರಿಗಳು ಆರಂಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಳ್ಳುತ್ತಾರೆ.
ಸಂಕರ್ಷ್ 2016 ರಲ್ಲಿ 17 ನೇ ವಯಸ್ಸಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು. ಬೆನೆಟ್ ವಿಶ್ವವಿದ್ಯಾನಿಲಯದಿಂದ (ಗ್ರೇಟರ್ ನೋಯ್ಡಾ) ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು. ಆದರೆ ಷೇರು ಮಾರುಕಟ್ಟೆಯ ಮೇಲಿನ ಆಸಕ್ತಿಯಿಂದಾಗಿ, ತಮ್ಮ ಅಧ್ಯಯನವನ್ನು ತ್ಯಜಿಸಿದರು. ಷೇರು ಮಾರುಕಟ್ಟೆಯಲ್ಲಿ ಕೇವಲ 2000 ರೂಪಾಯಿಯೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಿದರು.