ನೀವು ನೀಡುವ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಸಿಬ್ಬಂದಿ ಮಷಿನ್ನಲ್ಲಿ ಚೆಕ್ ಮಾಡಿ ನಿಮಗೆ ಬೇರೆ ನೋಟುಗಳನ್ನು ನೀಡುತ್ತಾರೆ. ಒಂದು ವೇಳೆ ನಿಮಗೆ ಅರಿವಿಲ್ಲದೇ ನಕಲಿ 2 ಸಾವಿರ ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ಕಷ್ಟ. ಯಾಕೆಂದ್ರೆ ನಿಮಗೆ ತಿಳಿಯದೇ ನಿಮ್ಮ ಬಳಿ ಇದ್ದ ನಕಲಿ ನೋಟುಗಳನ್ನು ಬ್ಯಾಂಕ್ಗೆ ಕೊಟ್ಟು, ಅವರಿಗೆ ಅದು ನಕಲಿ ಅಂತ ಗೊತ್ತಾದ್ರೆ ನಿಮಗೆ ಒಂದು ರೂಪಾಯಿ ಕೂಡ ಸಿಗೋದಿಲ್ಲ.