Salary Hike: ರಾಜ್ಯ ಸರ್ಕಾರದಿಂದ ಗಾರ್ಮೆಂಟ್ಸ್ ನೌಕರರಿಗೆ ಬಿಗ್ ಗಿಫ್ಟ್!
ಕಳೆದ ಕೆಲವು ವರ್ಷಗಳಿಂದ ತಮ್ಮ ಕನಿಷ್ಠ ವೇತನ ಪರಿಷ್ಕರಿಸಬೇಕು ಅಂತ ಗಾರ್ಮೆಂಟ್ಸ್ ಕಾರ್ಮಿಕರು ಮನವಿ ಮಾಡಿಕೊಂಡು ಬಂದಿದ್ದರು. ಇದೀಗ ರಾಜ್ಯ ಸರ್ಕಾರ ಅವರಿಗೆ ಬಿಗ್ ಗಿಫ್ಟ್ ನೀಡಿದೆ.
ವಿಶ್ವದಲ್ಲಿ ಕಳೆದ ಕೆಲವು ತಿಂಗಳುಗಳಿಂದ ದೊಡ್ಡ ದೊಡ್ಡ ಕಂಪನಿಗಳು ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಗಾರ್ಮೆಂಟ್ಸ್ ಕೆಲಸಗಾರರಿಗೆ ಗುಡ್ ನ್ಯೂಸ್ ನೀಡಿದೆ.
2/ 7
ರಾಜ್ಯದಲ್ಲಿನ ಗಾರ್ಮೆಂಟ್ಸ್, ಸ್ಪಿನ್ನಿಂಗ್ ಮಿಲ್ , ರೇಷ್ಮೆಬಟ್ಟೆಹಾಗೂ ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಿನ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
3/ 7
ಕಳೆದ ಕೆಲವು ವರ್ಷಗಳಿಂದ ತಮ್ಮ ಕನಿಷ್ಠ ವೇತನ ಪರಿಷ್ಕರಿಸಬೇಕು ಅಂತ ಕಾರ್ಮಿಕರು ಮನವಿ ಮಾಡಿಕೊಂಡು ಬಂದಿದ್ದರು. ಕೊನೆಗೂ ಕಾರ್ಮಿಕರ ಮನವಿಗೆ ಸ್ಪಂದಿಸಿದ ಕಾರ್ಮಿಕ ಇಲಾಖೆ ಈ ಆದೇಶ ಹೊರಡಿಸಿದೆ.
4/ 7
ಕಾರ್ಮಿಕ ಇಲಾಖೆಯು 2017ರಲ್ಲಿ ಸಭೆ ನಡೆಸಿ ಪರಿಷ್ಕೃತ ಕನಿಷ್ಠ ವೇತನ ದರ ನಿಗದಿ ಮಾಡಿತ್ತು. ಬಳಿಕ 2019ರಲ್ಲಿ ನಡೆದಿದ್ದ ಸಭೆಯಲ್ಲಿ ಕಾರ್ಖಾನೆಗಳ ಮಾಲೀಕರ ಒತ್ತಾಯದ ಮೇರೆಗೆ ಮತ್ತೆ ಕನಿಷ್ಠ ವೇತನ ಪರಿಷ್ಕರಿಸಲಾಗಿತ್ತು.
5/ 7
2019ರಲ್ಲಿ ನಡೆದ ಸಭೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕನಿಷ್ಠ ವೇತನ ದರ ನಿಗದಿ ಮಾಡಲಾಗಿತ್ತು. ಈ ಎರಡು ಸಭೆಗಳಲ್ಲಿ ನಿಗದಿಯಾಗಿದ್ದ ಕನಿಷ್ಠ ವೇತನದಲ್ಲಿ ಯಾವುದನ್ನು ಜಾರಿ ಮಾಡಬೇಕು ಎಂಬ ಬಗೆಗಿನ ವಿಷಯವು ನ್ಯಾಯಾಲಯದ ಮೆಟ್ಟಿಲು ಏರಿತ್ತು.
6/ 7
ಇತ್ತೀಚೆಗೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ
7/ 7
2019ರಲ್ಲಿ ವಿವಿಧ ಕೆಲಸಗಳಿಗೆ ನಿಗದಿಯಾಗಿದ್ದ ಕನಿಷ್ಠ ವೇತನಕ್ಕೆ ಶೇ.14ರಷ್ಟು ಹೆಚ್ಚಳ ಮಾಡಿ ಪರಿಷ್ಕೃತ ಕನಿಷ್ಠ ವೇತನ ಜಾರಿ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.