ಮಾವನ್ನು ಭಾರತದಲ್ಲಿ ಹಣ್ಣುಗಳ ರಾಜ ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ ವಿವಿಧ ರೀತಿಯ ಮಾವಿನ ಹಣ್ಣುಗಳಿವೆ. ಆದರೆ ಅವುಗಳಲ್ಲಿ ಯಾವುದೂ ದುಬಾರಿ ಎನಿಸುವುದಿಲ್ಲ. ಏಕೆಂದರೆ ಅವು ಕೆಜಿಗೆ 200-250 ಇರುತ್ತದೆ. ಆದರೆ ಈಗ ರೈತರು ಕೆಜಿಗೆ ಲಕ್ಷ ರೂಪಾಯಿ ಸಿಗುವ ಅತ್ಯಂತ ದುಬಾರಿ ಮಾವು ಬೆಳೆಯಲು ಸಿದ್ಧರಾಗಿದ್ದಾರೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ವಿವಿಧ ರೀತಿಯ ಮಾವುಗಳನ್ನು ಬೆಳೆಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಈ ದುಬಾರಿ ಮಾವನ್ನು ವಾಣಿಜ್ಯಿ ಬೆಳೆಯಾಗಿ ಬೆಳೆಸಲು ಕೃಷಿ ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ. ಮಾಲ್ಡಾದ ಇಂಗ್ಲಿಷ್ ಬಜಾರ್ ಬ್ಲಾಕ್‌ನಲ್ಲಿರುವ ಉದ್ಯಾನದಲ್ಲಿ ಮಿಯಾಜಾಕಿ ಸಸಿಗಳನ್ನು ನೆಡಲಾಗಿದೆ. ಈ ಮಿಯಾಜಾಕಿ ಮಾವಿನ ಗಿಡಗಳನ್ನು ಜಪಾನ್‌ನಿಂದ ತರಿಸಿಕೊಳ್ಳಲಾಗಿದೆ. ಈ ಗಿಡಗಳು ಒಂದು ವಾರದಲ್ಲಿ ಜಪಾನ್‌ನಿಂದ ಮಾಲ್ಡಾ ತಲುಪಿವೆ. ಮಾಲ್ಡಾದಲ್ಲಿ ಈಗಾಗಲೇ ಸುಮಾರು 100 ವಿಧದ ಮಾವುಗಳನ್ನು ಬೆಳೆಯಲಾಗುತ್ತದೆ. ಇದೀಗ ಮಿಯಾಜಾಕಿ ಕೂಡ ಅವುಗಳ ಜೊತೆ ಸೇರಿಕೊಂಡಿದೆ.
ಜಪಾನೀಸ್ ಮಿಯಾಜಾಕಿ ಮಾವಿನ ಹಣ್ಣು ವಿಶ್ವದಲ್ಲಿಯೇ ಅತಿ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ಅಪರೂಪದಲ್ಲಿ ಅಪರೂಪದ ಈ ತಳಿಯ ಹಣ್ಣಿಗೆ ಕೆಜಿಗೆ 8000 ರೂಪಾಯಿಗಳಿಂದ ಆರಂಭವಾಗಲಿದೆ. ಕಳೆದ ವರ್ಷ ಜಪಾನ್‌ನಲ್ಲಿ ಒಂದು ಕೆಜಿಗೆ 2.7 ಲಕ್ಷ ರೂಪಾಯಿಗೆ ಮಾರಾಟವಾಗಿ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಈ ತಳಿಯ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ.