Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

ಸಿನಿ ಇಂಡಸ್ಟ್ರಿಯಲ್ಲಿ ಹಿಟ್ ಕಾಂಬಿನೇಷನ್​​ಗಳ ಕ್ರೇಜ್ ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಯಶಸ್ವಿಯಾದ ‘ಭೀಷ್ಮ’ ಚಿತ್ರದ ನಂತರ ನಾಯಕ ನಿತಿನ್, ರಶ್ಮಿಕಾ ಮತ್ತು ನಿರ್ದೇಶಕ ವೆಂಕಿ ಕುಡುಮುಲ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ಪೂಜಾ ಕಾರ್ಯಗಳೊಂದಿಗೆ ಸಿನಿಮಾ ಆರಂಭವಾಗಿದೆ. ಈ ಚಿತ್ರದ ಮೊದಲ ಶಾಟ್​​ಗೆ ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್ ಮಾಡಿದರು.

First published:

  • 17

    Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

    'ಭೀಷ್ಮ' ಚಿತ್ರದ ಅದ್ಧೂರಿ ಯಶಸ್ಸಿನ ನಂತರ ನಟ ನಿತಿನ್ಗೆ ಯಾವುದೇ ಹಿಟ್ ಸಿಗಲಿಲ್ಲ. ಇದೀಗ ಅದೇ ನಾಯಕಿ ರಶ್ಮಿಕಾ ಜೊತೆ ಸಕ್ಸಸ್ ನೀಡಿದ ವೆಂಕಿ ಕುಡುಮುಲ ನಿರ್ದೇಶನದ ಹೊಸ ಚಿತ್ರ ಇಂದು ಪೂಜಾ ಕಾರ್ಯಗಳೊಂದಿಗೆ ಶುರುವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಶಾಟ್​ಗೆ ನಾಯಕ ನಿತಿನ್ ಮತ್ತು ರಶ್ಮಿಕಾ ಮೇಲೆ ಚಿರಂಜೀವಿ ಕ್ಲಾಪ್ ಮಾಡಿದ್ದಾರೆ. (ಟ್ವಿಟರ್/ಫೋಟೋ)

    MORE
    GALLERIES

  • 27

    Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

    ಇತ್ತೀಚಿನ ಮಾಸ್ ಆಕ್ಷನ್ ಮಾಚರ್ಲಾ ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾವನ್ನು ನಿರ್ದೇಶಕ ವೈಎಸ್ ರಾಜಶೇಖರ್ ರೆಡ್ಡಿ ನಿರ್ದೇಶಿಸಿದ್ದರು. ಆದರೆ ಈ ಚಿತ್ರ ನಿರೀಕ್ಷಿತ ಗಳಿಕೆ ಮಾಡಿಲ್ಲ. ಈ ಚಿತ್ರವನ್ನು ಶ್ರೇಷ್ಠಾ ಮೂವೀಸ್ ನಿರ್ಮಿಸಿದೆ. (ಟ್ವಿಟರ್/ಫೋಟೋ)

    MORE
    GALLERIES

  • 37

    Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

    ಈ ಸಿನಿಮಾದ ನಂತರ ನಿತಿನ್ ಸದ್ಯ ವಕ್ಕಂತಂ ವಂಶಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸಕ್ಸಸ್ ನಿರೀಕ್ಷೆಯಲ್ಲಿರುವ ನಿತಿನ್ ಈ ಹೊಸ ಸಿನಿಮಾದ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ. (ಟ್ವಿಟರ್/ಫೋಟೋ)

    MORE
    GALLERIES

  • 47

    Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

    ಇದೀಗ ನಿತಿನ್ ಸ್ಕ್ರಿಪ್ಟ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ನಿತಿನ್ ಮತ್ತು ವಕ್ಕಂತಂ ವಂಶಿ ಈ ಸಿನಿಮಾದ ಮೂಲಕ ಒಳ್ಳೆಯ ಯಶಸ್ಸು ಗಳಿಸಲು ಶ್ರಮಿಸುತ್ತಿದ್ದಾರೆ. ಈ ಸಿನಿಮಾ ಹೀಗಿರುವಾಗ ನಿತಿನ್ ಇತ್ತೀಚೆಗಷ್ಟೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ನಿತಿನ್ ಮತ್ತೊಮ್ಮೆ ವೆಂಕಿ ಕುಡುಮುಲ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಭೀಷ್ಮಾ ಚಿತ್ರದ ನಂತರ ನಿತಿನ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆ. (ಟ್ವಿಟರ್/ಫೋಟೋ)

    MORE
    GALLERIES

  • 57

    Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

    ಖ್ಯಾತ ಕಂಪನಿ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಸಾಯಿ ಶ್ರೀರಾಮ್ ಅವರ ಛಾಯಾಗ್ರಹಣ ಮತ್ತು ಪ್ರವೀಣ್ ಪುಡಿ ಅವರ ಸಂಕಲನವಿದೆ. (ಟ್ವಿಟರ್/ಫೋಟೋ)

    MORE
    GALLERIES

  • 67

    Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

    ಚಲೋ ಸಿನಿಮಾ ಮೂಲಕ ಟಾಲಿವುಡ್ (Tollywood) ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda), ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತು.

    MORE
    GALLERIES

  • 77

    Rashmika Mandanna: ಸೆಟ್ಟೇರಿದೆ ರಶ್ಮಿಕಾ ಮಂದಣ್ಣ-ನಿತಿನ್ ಹೊಸ ಸಿನಿಮಾ, ಕ್ಲಾಪ್ ಮಾಡಿ ಶುಭಕೋರಿದ ಚಿರಂಜೀವಿ

    ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು.ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರೂ ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES