Numerology: ನಿಮ್ಮ ಹೆಸರು C, D ಅಕ್ಷರದಿಂದ ಸ್ಟಾರ್ಟ್ ಆಗುತ್ತಾ? ಹಾಗಾದ್ರೆ ಲೈಫ್ನಲ್ಲಿ ಹೀಗೆಲ್ಲಾ ಆಗುತ್ತಂತೆ
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು C ಮತ್ತು D ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ C: ಸಿ ವರ್ಣಮಾಲೆಯಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಸಾಕಷ್ಟು ಚಂಚಲ ಗುಣವನ್ನು ಹೊಂದಿರುತ್ತಾರೆ ಎಂದರೆ ತಪ್ಪಲ್ಲ. ಅವರು ಬಹು ಬೇಗ ಬದಲಾವಣೆ ಆಗುವ ಮನೋಭಾವವನ್ನು ಹೊಂದಿರುತ್ತಾರೆ.
2/ 8
ಹಾಗೆಯೇ ಈ ಹೆಸರಿನವರು ಹೊಂದಿಕೊಳ್ಳುವ ಗುಣವನ್ನು ಸಹ ಹೊಂದಿರುತ್ತಾರೆ. ಮೊಂಡತನ ಸ್ವಲ್ಪ ಇವರ ಹೆಸರನ್ನು ಹಾಳು ಮಾಡಬಹುದು. ತಮ್ಮ ಆಸೆಗಳನ್ನು ಪೂರೈಸಲು ಕಷ್ಟದ ಕೆಲಸ ಮಾಡಲು ಸಹ ಸಿದ್ಧರಿದ್ದಾರೆ.
3/ 8
ಆದರೆ ಕೆಲವೊಂದು ಬಾರಿ ಇದು ವಿಪರೀತಕ್ಕೆ ಹೋಗಬಹುದು, ಆದರೆ ಅವರ ಉದಾರತೆ ಮತ್ತು ತತ್ವಗಳನ್ನು ಅನುಸರಿಸುವ ಮೂಲಕ ಉತ್ತಮ ಜೀವನ ನಡೆಸುತ್ತಾರೆ. ಅವರ ಬುದ್ದಿವಂತಿಕೆ ಅವರ ಆಸ್ತಿ, ಇದು ಭವಿಷ್ಯದಲ್ಲಿ ಲಾಭ ನೀಡುತ್ತದೆ.
4/ 8
C ವರ್ಣಮಾಲೆಯನ್ನು ಮೊದಲ ಅಕ್ಷರವಾಗಿ ಹೊಂದಿರುವ ಜನರು ಯಾವಾಗಲೂ ಸಾಂಪ್ರದಾಯಿಕ ಯೋಜನೆಗಿಂತ ಹೆಚ್ಚಾಗಿ ಸೃಜನಶೀಲ ರೀತಿಯಲ್ಲಿ ಯೋಚನೆ ಮಾಡುತ್ತಾರೆ. ಮಾನಸಿಕವಾಗಿ ಜಾಗರೂಕರಾಗಿರುತ್ತಾರೆ ಮತ್ತು ವಾದಗಳಲ್ಲಿ ಅವರನ್ನು ಸೋಲಿಸುವುದು ತುಂಬಾ ಕಷ್ಟ.
5/ 8
ಹೇಗಾದರೂ ಪರಿಸ್ಥಿತಿಯನ್ನು ಗೆಲ್ಲುತ್ತಾರೆ ಮತ್ತು ಅದನ್ನು ತಮ್ಮ ಪರವಾಗಿ ತಿರುಗಿಸುವುದರಲ್ಲಿ ಚಾಣಕ್ಯರಾಗಿರುತ್ತಾರೆ. ಅವರಿಗೆ ತೃಪ್ತಿಯಾಗದ ಗೆಲುವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಬೆಳಗ್ಗೆ ಹಣೆಗೆ ಶ್ರೀಗಂಧವನ್ನು ಹಚ್ಚಿಕೊಳ್ಳಿ, ಅದೃಷ್ಟದ ಬಣ್ಣಗಳು ಕಿತ್ತಳೆ ಮತ್ತು ನೇರಳೆ.
6/ 8
ಆಲ್ಫಾಬೆಟ್ D: ವರ್ಣಮಾಲೆ D ಯಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಮತ್ತು ಅವರ ಕೋಪ ನಿಯಂತ್ರಣದಲ್ಲಿ ಇರುತ್ತದೆ. ಇದು ಅವರಿಗೆ ಯಶಸ್ಸು ಪಡೆಯಲು ಸಹಾಯ ಮಾಡುತ್ತದೆ.
7/ 8
ಯಾವುದೇ ಎತ್ತರಕ್ಕೆ ಹೋಗಬಹುದಾದ ಅದೃಷ್ಟದ ವರ್ಣಮಾಲೆ ಇದು ಎನ್ನಬಹುದು. ಅವರು ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ತಮ್ಮ ಆಲೋಚನೆಗಳನ್ನು ನೈಜವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ವಸ್ತು ಆಧಾರಿತ ಮತ್ತು ಸಮೃದ್ಧಿಯನ್ನು ಆನಂದಿಸುತ್ತಾರೆ. ಅಲ್ಲದೇ ಮಾತಿನ ಮೇಲೆ ಹಿಡಿತವನ್ನ ಸಹ ಹೊಂದಿದ್ದಾರೆ.
8/ 8
ಸಮಾಜದಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದಿದ್ದಾರೆ ಮತ್ತು ಕೆಲಸದ ಸ್ಥಳದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದಾರೆ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡಿ. ಅದೃಷ್ಟದ ಬಣ್ಣಗಳು ನೀಲಿ ಮತ್ತು ಬೂದು