ಸ್ಯಾಂಡಲ್ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಫ್ಯಾಮಿಲಿ ವೆಕೇಷನ್ ತೆರಳಿದ್ದು ದುಬೈನಲ್ಲಿ ರಜಾದಿನಗಳನ್ನು ಎಂಜಾಯ್ ಮಾಡಿದ್ದಾರೆ. ಅವರ ರಜಾ ದಿನದ ಕೆಲವು ಫೋಟೋಸ್ ಇಲ್ಲಿವೆ.
2/ 8
ಅಮ್ಮ ಬಾನೆತ್ತರ ಹಾರುವಾಗ ರಣ್ವಿತ್ ಶೆಟ್ಟಿ ಜೋರಾಗಿ ಅತ್ತಿದ್ದರೆ ರಿಷಬ್ ಶೆಟ್ಟಿ ಅವರು ಜೋರಾಗಿ ನಗುವುದನ್ನು ಈ ಫೋಟೋದಲ್ಲಿ ಕಾಣಬಹುದು.
3/ 8
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಜೊತೆ ಬೀಚ್ ಸೈಡ್ ಕುಳಿತು ಎಂಜಾಯ್ ಮಾಡುವುದನ್ನು ಈ ಫೋಟೋದಲ್ಲಿ ಕಾಣಬಹುದು.
4/ 8
ಪ್ರಗತಿ ಶೆಟ್ಟಿ ಅವರ ಜೊತೆ ಪುಟ್ಟ ಮಗಳು ರಾಧ್ಯ ಕೂಡಾ ಈ ದುಬೈ ವೆಕೇಷನ್ ಎಂಜಾಯ್ ಮಾಡಿದ್ದಾಳೆ. ಆದರೆ ಈ ಫೋಟೋದಲ್ಲಿ ರಾಧ್ಯ ಅಮ್ಮನ ತೋಳಲ್ಲಿ ನಿದ್ರಿಸುವುದನ್ನು ಕಾಣಬಹುದು.
5/ 8
ದುಬೈನಲ್ಲಿ ಔಟಿಂಗ್, ಗೇಮ್ಸ್, ವಿಶೇಷ ಡಿನ್ನರ್ ಎಂಜಾಯ್ ಮಾಡಿದ ಜೋಡಿ ಇವೆಲ್ಲವನ್ನೂ ಸೇರಿಸಿ ಒಂದು ಚಂದದ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
6/ 8
ರಿಷಬ್ ಶೆಟ್ಟಿ ಮಗಳು ರಾಧ್ಯ ರಿಷಬ್ ಶೆಟ್ಟಿಯ ಕ್ಲೋಸಪ್ ಲುಕ್. ಅಮ್ಮನ ಮುಖವನ್ನು ದಿಟ್ಟಿಸಿ ನೋಡುತ್ತಿರುವ ಮಗಳು. ಬೋಟಿಂಗ್ ಸಂದರ್ಭ ಈ ದೃಶ್ಯ ಕಂಡುಬಂದಿದೆ.
7/ 8
ರಣ್ವಿತ್ ಶೆಟ್ಟಿ ನೀರಿನಲ್ಲಿ ಆಡಿ ಎಂಜಾಯ್ ಮಾಡಿದ್ದು ಸಖತ್ ಖುಷಿಯಾಗಿರುವುದನ್ನು ಇಲ್ಲಿ ಕಾಣಬಹುದು. ರಣ್ವಿತ್ ನೀರಲ್ಲಿ ಎಂಜಾಯ್ ಮಾಡಿದ್ರೆ ಟನಲ್ ಅಕ್ವೇರಿಯಂ ನೋಡಿ ಅಚ್ಚರಿಪಟ್ಟಿದ್ದಾನೆ.
8/ 8
ರಿಷಬ್ ದಂಪತಿ ಟ್ರಿಪ್ ಶುರು ಮಾಡಿದ್ದು ಹೀಗೆ. ಅವರ ಫ್ಲೈಟ್ ಫೊಟೋ ಕೂಡಾ ವಿಡಿಯೋ ಶೇರ್ ಮಾಡಿದ್ದು ಇಬ್ಬರೂ ರಾಕಿಂಗ್ ಲುಕ್ನಲ್ಲಿ ಕಾಣಿಸಿದ್ದಾರೆ.