ಭಾರತದಲ್ಲಿರುವ 140 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 45 ಕೋಟಿ ಜನರು ಉದ್ಯೋಗ ಹುಡುಕುತ್ತಿದ್ದಾರೆ. ದೇಶದಲ್ಲಿ ಅನೇಕ ಯುವಕರು ಮತ್ತು ಮಧ್ಯವಯಸ್ಕ ಜನರು ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ವ್ಯಾಪಾರ ಕೌಶಲ ಹೊಂದಿರುವ ಅನೇಕ ಜನರಿದ್ದಾರೆ ಮತ್ತು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಅವರು ಲಕ್ಷ ರೂಪಾಯಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಕೋಮಲ್ ಅವರ ಗಂಡ ಗೋಪಾಲ್ ಸಿಂಗ್ ಸಿಸೋಡಿಯಾ ಅವರಿಗೆ ಹಸುಗಳ ಮೇಲೆ ವಿಪರೀತ ಪ್ರೀತಿ, ಇದೇ ಕಾರಣದಿಂದ 2014ರಲ್ಲಿ 5 ಗಿರ್ ತಳಿಯ ಹಸುಗಳನ್ನು ತಂಡು ಸಾಕಿದರು. ದಂಪತಿ ಮೊದಲು 5 ಹಸುಗಳ ಹಾಲನ್ನು ಸುತ್ತಮುತ್ತಲಿನ ಮನೆಗಳಲ್ಲಿ ಮಾರಾಟ ಮಾಡಲು ಶುರು ಮಾಡಿದರು. ಕ್ರಮೇಣ ಹಾಲಿನ ಬೇಡಿಕೆ ಹೆಚ್ಚಾಗತೊಡಗಿತು. ಸದ್ಯ ಕೋಮಲ್ ಬಳಿ 35 ಹಸುಗಳು ಮತ್ತು 15 ಕರುಗಳಿವೆ, ಒಂದಷ್ಟು ಎಮ್ಮೆಗಳೂ ಇವೆ. ಹಸು-ಎಮ್ಮೆಗಳಿಂದ ದಿನಕ್ಕೆ 160 ಲೀಟರ್ ಹಾಲು ಪಡೆಯುತ್ತಿದ್ದಾರೆ. ಕೊಟ್ಟಿಗೆ ನಿರ್ವಹಣೆಗಾಗಿ ಇಬ್ಬರು ಕೆಲಸಗಾರರನ್ನು ಸಹ ನೇಮಿಸಿಕೊಂಡಿದ್ದಾರೆ.
ಕೋಮಲ್ ಕುನ್ವರ್ ಅವರ ಪತಿ ಗೋಪಾಲ್ ಸಿಂಗ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿತ್ಯ ಬೆಳಗ್ಗೆ ಬೈಕ್ನಲ್ಲಿ ಗ್ರಾಹಕರ ಮನೆಗೆ ಹಾಲು ತಲುಪಿಸುತ್ತಾರೆ. ನಂತರ ಅವರು ಕೆಲಸಕ್ಕೆ ಹೋಗುತ್ತಾರೆ. ಸಂಜೆ ಕೆಲಸ ಮುಗಿಸಿ ಬಂದ ನಂತರ ಮತ್ತೆ ಬೈಕ್ ತೆಗೆದುಕೊಂಡು ಮನೆಗಳಿಗೆ ಹಾಲು ಕೊಡಲು ಹೋಗುತ್ತಿದ್ದರು. ಇದಲ್ಲದೆ, ಗೋಪಾಲ್ ಸಿಂಗ್ ಹಸುಗಳು ಮತ್ತು ಎಮ್ಮೆಗಳಿಗೆ ಅನಾರೋಗ್ಯಕ್ಕೆ ಒಳಗಾಗದರೆ ಸ್ವತಃ ಚಿಕಿತ್ಸೆ ನೀಡುತ್ತಾರೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ದುಡಿಯಬೇಕಾಗಿರುವುದರಿಂದ ಅರೆಕಾಲಿಕ ಉದ್ಯೋಗವಾಗಿ ಹಾಲಿನ ವ್ಯಾಪಾರ ಆರಂಭಿಸಿದ್ದಾಗಿ ಗೋಪಾಲ್ ತಿಳಿಸಿದ್ದು, ನಂತರ ಈ ಕೆಲಸ ಪೂರ್ಣಾವಧಿಯಾಗಿದೆ.