Rahu Effect: ರಾಹುವಿನಿಂದ ಕಾಟ ಮಾತ್ರವಲ್ಲ ಒಳ್ಳೆದೂ ಆಗುತ್ತೆ, ಈ 3 ರಾಶಿಗೆ ಬಂಪರ್
Rahu Good Effect: 2023 ಪ್ರಾರಂಭವಾಗಿದೆ, ಕೆಲವೇ ದಿನಗಳಲ್ಲಿ ಗ್ರಹಗತಿ ಬದಲಾಗುತ್ತದೆ. ಹಾಗೆಯೇ ರಾಹು ಅಕ್ಟೋಬರ್ 30 ರವರೆಗೆ ಮೇಷ ರಾಶಿಯಲ್ಲಿ ಸಾಗುತ್ತಾನೆ. ಈ ಕಾರಣದಿಂದಾಗಿ, 3 ರಾಶಿಗಳಿಗೆ ಹಣದ ಹರಿವು ಹೆಚ್ಚಾಗಲಿದೆ. ಆ ರಾಶಿಗಳು ಯಾವುವು ಇಲ್ಲಿದೆ.
2023 ಪ್ರಾರಂಭವಾಗಿದೆ, ಕೆಲವೇ ದಿನಗಳಲ್ಲಿ ಗ್ರಹಗತಿ ಬದಲಾಗುತ್ತದೆ. ಹಾಗೆಯೇ ರಾಹು ಅಕ್ಟೋಬರ್ 30 ರವರೆಗೆ ಮೇಷ ರಾಶಿಯಲ್ಲಿ ಸಾಗುತ್ತಾನೆ. ಈ ಕಾರಣದಿಂದಾಗಿ, 3 ರಾಶಿಗಳಿಗೆ ಹಣದ ಹರಿವು ಹೆಚ್ಚಾಗಲಿದೆ. ಆ ರಾಶಿಗಳು ಯಾವುವು ಇಲ್ಲಿದೆ.
2/ 8
ವೈದಿಕ ಜ್ಯೋತಿಷ್ಯದಲ್ಲಿ, ರಾಹುವನ್ನು ತಪ್ಪಿಸಿಕೊಳ್ಳಲಾಗದ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ರಾಹು ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಹಿಮ್ಮುಖ ಸ್ಥಿತಿಯಲ್ಲಿ ಹೋಗುವುದರಿಂದ ಸಮಸ್ಯೆಯೇ ಜಾಸ್ತಿ. ಆದರೆ ಈ ರಾಶಿಗಳಿಗೆ ಲಾಭ ನೀಡುತ್ತಿದೆ.
3/ 8
ವೃಶ್ಚಿಕ: ಈ ರಾಶಿಯಲ್ಲಿ ರಾಹು ಗ್ರಹವು ಜಾತಕದ ಐದನೇ ಮನೆಯಲ್ಲಿ ಸಾಗುತ್ತಿದೆ. ಇದು ಸಂತಾನೋತ್ಪತ್ತಿ, ಉನ್ನತ ಶಿಕ್ಷಣ ಮತ್ತು ಪ್ರೀತಿಗೆ ಸಂಬಂಧಪಟ್ಟ ಸ್ಥಳವೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ನೀವು ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇರುತ್ತದೆ.
4/ 8
ಇಷ್ಟೇ ಅಲ್ಲದೇ, ಪ್ರೀತಿಸಿ ಮದುವೆಯಾಗಲು ಬಯಸುವವರಿಗೆ ಈ ಅವಧಿಯಲ್ಲಿ ಯೋಗವಿದ್ದು, ಪೋಷಕರು ಒಪ್ಪಿಕೊಳ್ಳುತ್ತಾರೆ. ನಿಮ್ಮ ವಿರೋಧಿಗಳನ್ನು ಸೋಲಿಸುವ ದಿನ ಇದು. ನೀವು ಬಹಳ ದಿನಗಳಿಂದ ಯೋಚಿಸುತ್ತಿದ್ದ ನಿಮ್ಮ ವೃತ್ತಿಜೀವನದಲ್ಲಿ ಆಫರ್ ನಿಮಗೆ ಇದ್ದಕ್ಕಿದ್ದಂತೆ ಬರಬಹುದು.
5/ 8
ಕರ್ಕಾಟಕ ರಾಶಿ: ರಾಹು ನಿಮ್ಮ ರಾಶಿಯಿಂದ 10 ನೇ ಮನೆಯಲ್ಲಿ ಸಾಗುತ್ತಿದ್ದಾನೆ. ಆದ್ದರಿಂದ, ಈ ಸಮಯದಲ್ಲಿ ನೀವು ಹೊಸ ಕೆಲಸದ ಆಫರ್ ಪಡೆಯಬಹುದು. ಅಲ್ಲದೆ, ಹಣಕಾಸಿನ ಪರಿಸ್ಥಿತಿ ಸಹ ಸದೃಢವಾಗುತ್ತದೆ. ಆದಾಯದ ಮೂಲ ಸಹ ಹೆಚ್ಚಾಗುತ್ತದೆ. ವ್ಯವಹಾರವನ್ನು ವಿಸ್ತರಿಸುವ ಯೋಜನೆ ಮಾಡಿದರೆ ಲಾಭ ಸಿಗುತ್ತದೆ.
6/ 8
ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಮತ್ತು ಯಶಸ್ಸನ್ನು ಸಾಧಿಸಬಹುದು. ಈ ಸಮಯದಲ್ಲಿ, ನೀವು ವ್ಯಾಪಾರಕ್ಕೆ ಸಂಬಂಧಿಸಿದ ಪ್ರವಾಸಕ್ಕೆ ಹೋಗಬಹುದು, ಇದರಿಂದಾಗಿ ಭವಿಷ್ಯದಲ್ಲಿ ಲಾಭ ಪಡೆಯುವ ಸಾಧ್ಯತೆ ಇದ್ದು, ನಿಧಾನವಾಗಿ ಯೋಚಿಸಿ, ನಿರ್ಧಾರ ಮಾಡಿ.
7/ 8
ಕನ್ಯಾ ರಾಶಿ: ರಾಹುವಿನ ಹಿಮ್ಮುಖ ಚಲನೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ರಾಹು ಗ್ರಹವು ನಿಮ್ಮ ಜಾತಕದಲ್ಲಿ ಎಂಟನೇ ಮನೆಯಲ್ಲಿ ಸಾಗುತ್ತಿದೆ. ಅದಕ್ಕಾಗಿಯೇ ಈ ಸಮಯದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಆರ್ಥಿಕವಾಗಿ ಸಹ ಲಾಭಗಳು ಹೆಚ್ಚಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)