Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

ಅನೇಕ ಕಷ್ಟಗಳ ನಡುವೆಯೂ ತಮ್ಮ ಮಕ್ಕಳು ಮುಖದಲ್ಲಿ ನಗು ತರಿಸಲು ಪೋಷಕರು ತುಂಬಾ ಶ್ರಮಿಸುತ್ತಾರೆ. ತಮ್ಮ ಮಕ್ಕಳ ಜನ್ಮದಿನವನ್ನ ವಿಶೇಷವಾಗಿ ಆಚರಿಸಿ, ಆ ದಿನವನ್ನು ವಿಶೇಷವಾಗಿಸಲು ಬಯಸುತ್ತಾರೆ.

First published:

  • 17

    Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಅನೇಕ ಕಷ್ಟಗಳ ನಡುವೆಯೂ ತಮ್ಮ ಮಕ್ಕಳ ಮುಖದಲ್ಲಿ ನಗು ತರಿಸಲು ಪೋಷಕರು ತುಂಬಾ ಶ್ರಮಿಸುತ್ತಾರೆ. ತಮ್ಮ ಮಕ್ಕಳ ಜನ್ಮದಿನವನ್ನ ವಿಶೇಷವಾಗಿ ಆಚರಿಸಿ, ಆ ದಿನವನ್ನು ಸ್ಮರಣೀಯವಾಗಿಸಲು ಬಯಸುತ್ತಾರೆ.

    MORE
    GALLERIES

  • 27

    Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಏಳು ತಿಂಗಳ ಕಾಲ ಮೀರತ್ ಜಿಲ್ಲಾ ಕಾರಾಗೃಹದಲ್ಲಿರುವ ಮಹಿಳಾ ಕೈದಿಯೊಬ್ಬರು ಕೂಡ ಇದೇ ಕನಸನ್ನು ಕಂಡಿದ್ದರು. ಜೈಲಿನಲ್ಲಿದ್ದರೂ ತನ್ನ ಮಗನ ಎರಡನೇ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಕನಸು ಕಂಡಿದ್ದರು.

    MORE
    GALLERIES

  • 37

    Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಆದರೆ ಜೈಲಿನಲ್ಲಿದ್ದರಿಂದ ಆಕೆಗೆ ತನ್ನ ಮಗನ ಜನ್ಮದಿನವನ್ನಾಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗಿತ್ತು. ಆದರೆ ಈ ವಿಷಯ ತಿಳಿದ ಜೈಲು ಅಧಿಕಾರಿಗಳು ಈ ಮಹಿಳೆಯ ಮಗುವಿನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುವ ಮೂಲಕ ಆಕೆಯ ಮುಖದಲ್ಲಿ ಸಂತಸ ಮೂಡುವಂತೆ ಮಾಡಿದ್ದಾರೆ.

    MORE
    GALLERIES

  • 47

    Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಸಾಮಾನ್ಯವಾಗಿ ಆಗಸ್ಟ್ 15, ಜನವರಿ 26 ಸೇರಿದಂತೆ ವಿಶೇಷ ಹಬ್ಬಗಳಂದು ಜೈಲಿನ ಆವರಣವನ್ನು ಅಲಂಕರಿಸಿರುವುದು ಕಂಡುಬರುತ್ತದೆ.  ಆ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಆದರೆ ಬುಧವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಯ ಮಗುವಿನ ಜನ್ಮದಿನವನ್ನ ಆಚರಿಸಲು ಕಾರಾಗೃಹವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿತ್ತು.

    MORE
    GALLERIES

  • 57

    Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಜೈಲಿನಲ್ಲಿರುವ ಬಂಧಿತ ಮಹಿಳೆಯರೊಂದಿಗೆ ಕೆಲವು ಮಕ್ಕಳು ಸಹ ಇದ್ದಾರೆ. ಹೀಗೆ ಜೈಲಿನಲ್ಲಿದ್ದ ಮಹಿಳಾ ಕೈದಿ ತನ್ನ ಮಗನ 2ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಬೇಕೆಂದು ಬಯಸಿದ್ದರು ಈ ವಿಚಾರ ನಮ್ಮ ಗಮನಕ್ಕೆ ಬಂದ ನಂತರ ಮಗುವಿನ ಜನ್ಮದಿನ ಆಚರಣಗೆ ವ್ಯವಸ್ಥೆ ಮಾಡಿದೆವು ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ರಾಕೇಶ್ ಕುಮಾರ್ ಹೇಳಿದ್ದಾರೆ.

    MORE
    GALLERIES

  • 67

    Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಮಗುವಿನ ಹುಟ್ಟುಹಬ್ಬದ ವಿಚಾರ ಜೈಲು ಆಡಳಿತ ಮಂಡಳಿಗೆ ತಿಳಿದಾಗ ನಿಯಮಾನುಸಾರ ಜೈಲಿನ ಆವರಣದಲ್ಲಿ ಹುಟ್ಟುಹಬ್ಬ ಆಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಕೇಕ್​ನಿಂದ ಟೋಪಿಯವರೆಗೂ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು. ಮಗುವಿನ ಹುಟ್ಟುಹಬ್ಬಕ್ಕೆ ಆವರಣದಲ್ಲಿ ವಾಸವಿದ್ದ ಇತರೆ ಮಹಿಳೆಯರು, ಜತೆಗಿದ್ದ ಮಕ್ಕಳನ್ನೂ ಆಹ್ವಾನಿಸಲಾಗಿದೆ.

    MORE
    GALLERIES

  • 77

    Birthday: ಜೈಲಿನಲ್ಲಿರುವ 2 ವರ್ಷದ ಮಗುವಿಗೆ ಜನ್ಮದಿನಾಚರಣೆ! ತಾಯಿಯ ಆಸೆ ಪೂರೈಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಜಿಲ್ಲಾ ಕಾರಾಗೃಹದ ನಿಯಮಗಳ ಅಡಿಯಲ್ಲಿ ಅವರ ತಾಯಿಯೊಂದಿಗೆ ಸುಧಾರಣಾ ಗೃಹದಲ್ಲಿ ವಾಸಿಸುವ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ  ಸೌಲಭ್ಯಗಳನ್ನು ಸಹ ಮಾಡಲಾಗಿದೆ . ಅವರೆಲ್ಲರಿಗೂ ಉತ್ತಮ ಶಿಕ್ಷಣ ಪಡೆಯಲು ಜೈಲು ಆಡಳಿತದಿಂದ ಸೂಕ್ತ ವ್ಯವಸ್ಥೆಯನ್ನೂ ಮಾಡಿದೆ. ಮಕ್ಕಳಿಗೆ ಪಾಠ ಮಾಡಲು ಹೊರಗಿನ ಶಿಕ್ಷಕರು ಜೈಲಿಗೆ ಬರುತ್ತಾರೆ. ಅದೇ ಸಮಯದಲ್ಲಿ, ನಿಯಮಗಳ ಅಡಿಯಲ್ಲಿ ಹತ್ತಿರದ ಶಾಲೆಯಲ್ಲಿಲೂ ಮಕ್ಕಳನ್ನು ದಾಖಲಿಸಲಾಗುತ್ತದೆ. ಅದಕ್ಕಾಗಿ ಆ ಮಕ್ಕಳನ್ನು ಕರೆತರಲು ಮತ್ತು ಕರೆದೊಯ್ಯಲು ಜೈಲು ಆಡಳಿತ ವ್ಯವಸ್ಥೆ ಮಾಡಿದೆ. ಮೀರತ್ ಜೈಲು ಆಡಳಿತದ ಈ ಕ್ರಮದಿಂದ ಮಹಿಳಾ ಕೈದಿಗಳು ಮತ್ತು ಸಣ್ಣ ಮಕ್ಕಳು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.

    MORE
    GALLERIES