Puneeth-Sanchari Vijay: ಈಗ ಅಂಗಾಂಗ ದಾನದಲ್ಲಿ ಕರ್ನಾಟಕವೇ ನಂಬರ್ 2! ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್ ಅವ್ರೇ ಸ್ಫೂರ್ತಿ
ಸಿನಿಮಾಗಳಲ್ಲಿ ಮಾತ್ರವಲ್ಲ ನಮ್ಮ ನಾಯಕರು ನಿಜ ಜೀವನದಲ್ಲೂ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ನಿಧನದ ಬಳಿಕವೂ ನಟ ಪುನೀತ್ ರಾಜ್ ಕುಮಾರ್, ನಟ ಸಂಚಾರಿ ವಿಜಯ್ ತಮ್ಮ ಕೆಲಸದಿಂದಲೇ ಚಿರಸ್ಮರಣೀಯರಾಗಿದ್ದಾರೆ.
ಭಾರತದಲ್ಲೇ ಅಂಗಾಂಗ ದಾನ ಮಾಡಿದವರ ಸಂಖ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 2022ರಲ್ಲಿ 151 ಮಂದಿ ಅಂಗಾಂಗ ದಾನ ಮಾಡಿದ್ದು ರಾಜ್ಯ 2ನೇ ಸ್ಥಾನದಲ್ಲಿದೆ.
2/ 8
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಹ ಅಂಗಾಂಗ ದಾನ ಮಾಡುವ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.
3/ 8
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ನೇತ್ರದಾನ ಮಾಡಿ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ.
4/ 8
ಈ ಕಲಾವಿದರ ಒಳ್ಳೆಯ ಕಾರ್ಯದಿಂದಾಗಿ ಅನೇಕರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.- ಇದ್ರಿಂದ ಅನೇಕರಿಗೆ ಉಪಯೋಗವಾಗಿದೆ.
5/ 8
ಹಲವರು ದಾನವನ್ನೂ ಮಾಡಿದ್ದಾರೆ. ಹೀಗಾಗಿ ಭಾರತದಲ್ಲೇ ಅಂಗಾಂಗ ದಾನ ಮಾಡಿದವರ ಸಂಖ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಅಂಗಾಂಗ ದಾನ ಮಾಡುವ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿ ಇದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ.
6/ 8
ಕಿಡ್ನಿ, ಲಿವರ್, ಹಾರ್ಟ್ ಸೇರಿದಂತೆ 770 ಅಂಗಾಂಗಳನ್ನು ದಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ 194 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಗುಜರಾತ್ ಮೂರನೇ ಸ್ಥಾನದಲ್ಲಿದೆ
7/ 8
ಅಪಘಾತ, ಆಕಸ್ಮಿಕ ಘಟನೆಗಳಲ್ಲಿ ಮೆದುಳು ನಿಷ್ಕ್ರಿಯಗೊಂಡಾಗ ಅಂಗಾಂಗ ದಾನ ಮಾಡಲಾಗುತ್ತದೆ. ಸಂಬಂಧಿಕರ ಒಪ್ಪಿಗೆ ಪಡೆದು ಅಂಗಾಂಗ ದಾನ ಮಾಡ್ತಾರೆ.
8/ 8
ಈವರೆಗೂ ಅಂಗಾಂಗ ದಾನಕ್ಕೆ ಹೆಚ್ಚಿನ ಜನರು ಮುಂದಾಗುತ್ತಿರಲಿಲ್ಲ. ನಟರಿಬ್ಬರು ಅಂಗಾಂಗ ದಾನ ಮಾಡುತ್ತಿದ್ದಂತೆಯೇ ಪ್ರೇರಣೆಗೊಂಡು ಹಲವಾರು ಜನರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಪುನೀತ್ ನೇತ್ರದಾನದ ಬಳಿಕ ಸಾವಿರಾರು ಮಂದಿ ನೇತ್ರದಾನದ ಅಭಿಯಾನಕ್ಕೆ ಸಾಥ್ ನೀಡಿದ್ರು.