ಬಿಗ್ ಬಾಸ್ ಸೀನಸ್ 09ರಲ್ಲಿ ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಸದಾ ಜೊತೆಗೆ ಇರುತ್ತಾರೆ. ತುಂಬಾ ಮಾತನಾಡುತ್ತಾರೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ.
2/ 8
ಅಮೂಲ್ಯ ರೂಪೇಶ್ ಶೆಟ್ಟಿ ಬಳಿ ಬಿಡದೇ ಮಾತನಾಡಿದ್ದಕ್ಕೆ, ರೂಪೇಶ್ ರಾಜಣ್ಣ ಕಾಮೆಂಟ್ ಹೇಳ್ತಾರೆ. ಅಮೂಲ್ಯ ಇಷ್ಟು ಚೆನ್ನಾಗಿ ಮಾತನಾಡೋಕೆ ರಾಕಿ ಕಾರಣ. ಆರ್ ಜೆ ಅಂದ್ರೆ ರಾಕಿ ರೆಡಿ ಮಾಡಿದ ಜಾಕಿ ಎಂದು ಹೇಳ್ತಾರೆ.
3/ 8
ಆಗ ರಾಕೇಶ್ ಅಡಿಗ ರಾಜಣ್ಣನಿಗೆ ಕಣ್ಣು ಹೊಡೆದು, ಈ ರೀತಿ ಮಾತನಾಡುವುದು ತಪ್ಪು. ನನ್ನಿಂದ ಅವಳು ಮಾತನಾಡುತ್ತಾಳೆ ಎಂದ್ರೆ ಏನ್ ಅರ್ಥ. ಲೈನ್ ಕ್ರಾಸ್ ಮಾಡಬೇಡಿ ಎಂದು ರಾಜಣ್ಣನಿಗೆ ಹೇಳುತ್ತಾರೆ.
4/ 8
ನಾನು ಆಕೆಯ ಒಳ್ಳೆಯ ಗುಣಗಳನ್ನು ಹೇಳಿದ್ದು. ಎಷ್ಟು ಚೆನ್ನಾಗಿ ಪಟ ಪಟ ಮಾತನಾಡುತ್ತಾರೆ ಅಂತ. ಅದಕ್ಕೆ ಏಕೆ ರೇಗುತ್ತೀರಿ. ನಾನು ಲೈನ್ ಹಾಕಿಕೊಂಡೇ ಕೂತಿದ್ದೇನೆ ಎಂದು ರಾಜಣ್ಣ ಹೇಳ್ತಾರೆ.
5/ 8
ತಮಾಷೆ ಮಾಡ್ತಾ ಇದ್ರೆ, ನೀವು ಮಾಡಿ. ನನ್ನನ್ನು ಯಾಕೆ ಮಧ್ಯೆ ತರುತ್ತೀರಿ. ನಾನು ಮಾತನಾಡುವುದನ್ನು ಹೇಳಿ ಕೊಟ್ಟಿದ್ದೀನಾ? ಎಂದು ರಾಕಿ ರಾಜಣ್ಣನಿಗೆ ಪ್ರಶ್ನೆ ಮಾಡ್ತಾರೆ. ಆಗ ಅಮೂಲ್ಯ ಒಂದು ನಿಮಿಷ ಎಂದು ಹೇಳಿದ್ರೂ ಇಬ್ಬರು ಕೇಳಿಸಿಕೊಳ್ಳಲಿಲ್ಲ.
6/ 8
ನೀವಿಬ್ಬರು ಏನಾದ್ರೂ ಮಾತನಾಡಿಕೊಳ್ಳಿ. ನನ್ನ ಹೆಸರು ಮಧ್ಯೆದಲ್ಲಿ ತರಬೇಡಿ ಎಂದು ಅಮೂಲ್ಯ ಗೌಡ ಬೇಸರ ಮಾಡಿಕೊಂಡು, ಎದ್ದು ಗಾರ್ಡನ್ ಏರಿಯಾಗೆ ಹೋಗ್ತಾರೆ.
7/ 8
ಅಮೂಲ್ಯ ಹೊರಗೆ ಹೋದ ಮೇಲೆ ರಾಜಣ್ಣ-ರಾಕಿ ಅಕ್ಕ ಪಕ್ಕ ಕೂತು ನಗುತ್ತಾರೆ. ರಾಜಣ್ಣ ನೀವು ಇನ್ನೂ ಜೋರಾಗಿ ಜಗಳ ಆಡಬೇಕಿತ್ತು ಎಂದು ರಾಕೇಶ್ ಅಡಿಗ ಹೇಳ್ತಾರೆ.
8/ 8
ನಂತರ ಗಾರ್ಡನ್ ಏರಿಯಾಗೆ ಹೋಗಿ, ನಾವು ಮಾಡಿದ್ದು ತಮಾಷೆಗಾಗಿ. ನಿನ್ನ ಬಕ್ರಾ ಮಾಡಲು ಅಷ್ಟೇ ಎಂದು ರಾಕೇಶ್, ರಾಜಣ್ಣ ಅಮೂಲ್ಯ ಗೌಡರನ್ನು ಸಮಾಧಾನ ಮಾಡ್ತಾರೆ.