Athiya Shetty-KL Rahul: ಜನವರಿ 23ಕ್ಕೆ ಅಥಿಯಾ ಶೆಟ್ಟಿ-ಕೆ ಎಲ್ ರಾಹುಲ್ ಕಲ್ಯಾಣ, ಸಿಂಗಾರಗೊಂಡಿದೆ ಸುನೀಲ್ ಶೆಟ್ಟಿ ಖಂಡಾಲ ಫಾರ್ಮ್ಹೌಸ್!
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಹಾಗೂ ನಟಿ ಅಥಿಯಾ ಶೆಟ್ಟಿ ಕ್ರಿಕೆಟಿಗ ಕೆ.ಎಲ್ ರಾಹುಲ್ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಇಬ್ಬರೂ ಜನವರಿ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮ್ಯಾನ್ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ಹೀರೋ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮದುವೆ ಸಂಭ್ರಮ ಶುರುವಾಗ್ತಿದೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ ನಲ್ಲಿ ವಿವಾಹದ ಸಿದ್ಧತೆ ಮಾಡಲಾಗಿತ್ತು.
2/ 7
ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿಯಿಂದ ಮದುವೆಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದ್ರೆ ಫಾರ್ಮ್ ಹೌಸ್ ನಲ್ಲಿ ಮದುವೆ ಸಿದ್ಧತೆ ಮಾತ್ರ ಜೋರಾಗಿದೆ
3/ 7
ರಾಹುಲ್ ಮತ್ತು ಅತಿಯಾಶೆಟ್ಟಿ ಮದುವೆ ಸಮಾರಂಭ ಈಗಾಗಲೇ ಆರಂಭವಾಗಿದೆ. ಖಂಡಾಲಾ ಬೆಟ್ಟದ ಮಧ್ಯೆ ಇರುವ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ ಮದುವೆಗೆ ಮಂಟಪ ರೆಡಿಯಾಗ್ತಿದೆ. ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
4/ 7
ಮದುವೆಯ ತಯಾರಿ ನಡುವೆ ಕಾಕ್ ಟೈಲ್ ಪಾರ್ಟಿ ಕೂಡ ನಡೆಸಲಾಗ್ತಿದೆ ಎನ್ನುವ ಮಾಹಿತಿ ಇದೆ.
5/ 7
ಸುನೀಲ್ ಶೆಟ್ಟಿಯ ಭವ್ಯ ಬಂಗಲೆಯಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲು ರಾಹುಲ್ ಹಾಗೂ ಅಥಿಯಾ ಶೆಟ್ಟಿ ರೆಡಿಯಾಗಿದ್ದಾರೆ. ಏಪ್ರಿಲ್ ನಲ್ಲಿ ಕೆ.ಎಲ್ ರಾಹುಲ್, ಅಥಿಯಾ ಶೆಟ್ಟಿ ಆರತಕ್ಷತೆ ಅದ್ಧೂರಿಯಾಗಿ ನಡೆಯಲಿದೆ.
6/ 7
ಖಂಡಾಲಾದಲ್ಲಿ ಸುನೀಲ್ ಶೆಟ್ಟಿ ಅವರ ಅದ್ದೂರಿ ಬಂಗಲೆ ಇದ್ದು, ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆ ಶಾಸ್ತ್ರಗಳು ಅಲ್ಲೇ ನಡೆಯಲಿದೆ. ಖಂಡಾಲಾದಲ್ಲಿ 3 ದಿನ ಮದುವೆಯ ಸಂಭ್ರಮ ಮನೆ ಮಾಡಲಿದೆ.
7/ 7
ಈಗಾಗಲೇ, ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಒಟ್ಟಿಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ ಇವರಿಬ್ಬರ ಲವ್ ಸ್ಟೋರಿ ಮೊದಲೇ ಅವರಿಬ್ಬರ ಅಭಿಮಾನಿಗಳಿಗೆ ತಿಳಿದಿತ್ತು.