Rashmika Mandanna: ನಟಿ ರಶ್ಮಿಕಾ ಮಂದಣ್ಣ ಪೆಟ್ ನೇಮ್ ಏನು? 'ಕಿರಿಕ್' ಬೆಡಗಿಯನ್ನು ಅಪ್ಪ-ಅಮ್ಮ ಹೇಗೆ ಕರೀತಾರೆ?
ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡ ಕಿರಿಕ್ ಪಾರ್ಟಿ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಬಾಲಿವುಡ್ ನಲ್ಲೂ (Bollywood) ಬಹು ಬೇಡಿಕೆಯ ನಟಿಯಾಗಿದ್ದಾರೆ.
ಮೂಲತಃ ಕೊಡಗಿನವರಾದ ರಶ್ಮಿಕಾ ಮಂದಣ್ಣ ತಂದೆ-ತಾಯಿಯ ಮುದ್ದಿನ ಮಗಳಾಗಿದ್ದಾರೆ. ಅಭಿಮಾನಿಗಳು ನಟಿಯನ್ನು ನ್ಯಾಷನಲ್ ಕ್ರಶ್ ಅಂತ ಕರೀತಾರೆ. ನಟಿಯನ್ನು ಮನೆಯಲ್ಲಿ ಏನ್ ಅಂತ ಕರೀತಾರೆ ಗೊತ್ತಾ?
2/ 8
ನನ್ನ ಅಪ್ಪ-ಅಮ್ಮ ನನ್ನನ್ನು ಮುದ್ದಾಗಿ ಮೋನಿ ಅಥವಾ ಮೋವಾ ಎಂದು ಕರೀತಾರೆ. ಕೊಡವ ಭಾಷೆಯಲ್ಲಿ ಮೋವಾ ಅಂದ್ರೆ ಮಗಳು ಎಂದು ರಶ್ಮಿಕಾ ಹೇಳಿದ್ದಾರೆ.
3/ 8
ತನ್ನ ಪೆಟ್ ನೇಮ್ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮಾಡಿ ನಟಿ ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಸ್ಟಾರ್ ಹೀರೋಗಳ ಜೊತೆ ಬಿಗ್ ಸ್ಕ್ರೀನ್ ಗಳಲ್ಲಿ ಮಿಂಚುತ್ತಿದ್ದಾರೆ.
4/ 8
ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರು ಕಿರಿಕ್ ಪಾರ್ಟಿ ಚಿತ್ರಕ್ಕೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ರು.
5/ 8
ಚಲೋ ಸಿನಿಮಾ ಮೂಲಕ ಟಾಲಿವುಡ್ (Tollywood) ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda), ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತು.
6/ 8
ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಪ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು.
7/ 8
ಪುಪ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
8/ 8
ಪುಪ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್ಗಳ ಸುರಿಮಳೆಯಾಗಿದೆ. ಬಿಗ್ ಬಿ ಅಮಿತಾಭ್ ಜೊತೆಯೇ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು. ಇದೀಗ ಬಾಲಿವುಡ್ ನಲ್ಲಿ ರಶ್ಮಿಕಾ 2ನೇ ಸಿನಿಮಾ ಮಿಷನ್ ಮಜ್ನು ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.