ಸೌತ್ ಸಿನಿಮಾಗಳಲ್ಲಿ ನಟಿಸಿರುವ ಆರತಿ ಛಾಬ್ರಿಯಾ ಕನ್ನಡದಲ್ಲೂ 3 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಹಾಗೂ ಕನ್ನಡ ಸಿನಿಮಾ ರಂಗದ ಬಗ್ಗೆ ನಟಿ ಮಾತಾಡಿದ್ದಾರೆ. ಅವಾರ್ಡ್ ಕಾರ್ಯಕ್ರಮದಲ್ಲಿ ಉತ್ತಮ ನಾಯಕಿ ಪ್ರಶಸ್ತಿಗೆ ನನ್ನ ಹೆಸರು ಕೂಡ ಆಯ್ಕೆಯಾಗಿತ್ತು ಆದ್ರೆ ನನಗೆ ಅವಾರ್ಡ್ ಸಿಕ್ಕಿಲ್ಲ ಅಂತ ನಟಿ ಆರತಿ ಛಾಬ್ರಿಯಾ ಬೇಸರ ಹೊರ ಹಾಕಿದ್ದಾರೆ. ನನಗೆ ಅವಾರ್ಡ್ ಮಿಸ್ ಆಗಲು ಕಾರಣ ತಿಳಿಸಿದ ನಟಿ ಕನ್ನಡ ಚಲನಚಿತ್ರದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಾನು ಕನ್ನಡದವಳಲ್ಲ, ಮಹಾರಾಷ್ಟ್ರದವಳು ಕರ್ನಾಟಕದಲ್ಲಿ ಹುಟ್ಟಿಲ್ಲ ಎನ್ನುವ ಕಾರಣಕ್ಕೆ ನಂಗೆ ಪ್ರಶಸ್ತಿ ಕೊಟ್ಟಿಲ್ಲ ಎಂದು ನಟಿ ಆರತಿ ಛಾಬ್ರಿಯಾ ಹೇಳಿಕೆ ನೀಡಿದ್ದಾರೆ. ಯಾರು ಈ ರೀತಿ ಹೇಳಿಕೆ ನೀಡಲ್ಲ ಆದ್ರೆ ನಾನು ಸತ್ಯ ಹೇಳ್ತಿದ್ದೇನೆ. ನಾನು ಕನ್ನಡದವಳು ಅಲ್ಲ ಎನ್ನುವ ಕಾರಣಕ್ಕೆ ನನಗೆ ಅವಾರ್ಡ್ ಮಿಸ್ ಆಗಿದೆ ಎಂದು ಆರತಿ ಛಾಬ್ರಿಯಾ ಹೇಳಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸಿ ಅವಾರ್ಡ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಚಿತ್ರರಂಗದ ಬಗ್ಗೆ ಮಾತಾಡಿದ ನಟಿ ಆರತಿ ಛಾಬ್ರಿಯಾ ವಿರುದ್ಧ ಕನ್ನಡ ಅಭಿಮಾನಿಗಳು ಗರಂ ಆಗಿದ್ದಾರೆ. ಆರತಿ ಬಾಲಿವುಡ್ನ ಫೇಮಸ್ ನಟಿಯಾಗಿದ್ದಾರೆ. ಕನ್ನಡ, ಪಂಜಾಬಿ, ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಚಿತ್ರ ಸಂತ, ರವಿಚಂದ್ರನ್ ಸಿನಿಮಾ ಅಹಂ ಪ್ರೇಮಾಸ್ಮಿ ಹಾಗೂ ರಜನಿ ಚಿತ್ರಗಳಲ್ಲಿ ನಟಿ ಆರತಿ ಛಾಬ್ರಿಯಾ ಅಭಿನಯಿಸಿದ್ದಾರೆ.