ಈ ಅಧ್ಯಯನದಲ್ಲಿ ತಿಳಿಸಿದಂತೆ ತಿಂದ ನಂತರ 2 ರಿಂದ 5 ನಿಮಿಷಗಳು ಜೋರಾಗಿ ವಾಕಿಂಗ್ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧಕರ ಪ್ರಕಾರ, ತಿಂದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಏರುತ್ತದೆ ಮತ್ತು ಈ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯರಕ್ತನಾಳದ ಸಮಸ್ಯೆಗಳನ್ನು ತಡೆಯಲು ಇನ್ಸುಲಿನ್ ಉತ್ಪತ್ತಿಯಾಗುತ್ತದೆ. (ಸಾಂಕೇತಿಕ ಚಿತ್ರ)
ಅಧ್ಯಯನದ ನೇತೃತ್ವ ವಹಿಸಿದ್ದ ಏಡನ್ ಬಫಿ ಅವರು, ನಿಂತು ವಾಕಿಂಗ್ ಮಾಡುವುದರಿಂದ ಸ್ನಾಯು ಸಂಕೋಚನ ಉಂಟಾಗುತ್ತದೆ. ಇದಕ್ಕಾಗಿ ದೇಹವು ಗ್ಲುಕೋಸ್ ಅನ್ನು ಬಳಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಊಟ ಮಾಡಿದ ನಂತರ 60 ರಿಂದ 90 ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ, ಹೆಚ್ಚಾಗಿರುವ ಗ್ಲೂಕೋಸ್ ನಿಯಂತ್ರಣಕ್ಕೆ ಬರುತ್ತದೆ ನಂತರ ನೀವು ಇದರಿಂದ ಪ್ರಯೋಜನ ಪಡೆಯಬಹುದು ಎಂದು ಹೇಳಿದ್ದಾರೆ.
ಆದರೆ ತಿಂದ ನಂತರ ಒಂದು ಸಣ್ಣ ವಾಕಿಂಗ್ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಜೊತೆಗೆ ವ್ಯಕ್ತಿಯ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ತಿನ್ನುವ 60 ರಿಂದ 90 ನಿಮಿಷಗಳಿಗೂ ಮುನ್ನ ವಾಕಿಂಗ್, ಮನೆಗೆಲಸ ಅಥವಾ ಇತರ ಯಾವುದೇ ಚಟುವಟಿಕೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಈಡನ್ ಬಫೆಟ್ ಹೇಳುತ್ತಾರೆ. (ಸಾಂಕೇತಿಕ ಚಿತ್ರ)