World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

ಮಕ್ಕಳಿಗೆ ಕಥೆ ಅಂದ್ರೆ ಪಂಚಪ್ರಾಣ. ಆದರೆ ಇತ್ತೀಚಿಗೆ ಮಕ್ಕಳು ಕಥೆಗಳಿಂದ ದೂರವಾಗ್ತಿದ್ದಾರೆ ಅನ್ನೋ ಮಾತಿದೆ. ಈ ಮಾತನ್ನು ಸುಳ್ಳಾಗಿಸಲು, ಮಕ್ಕಳನ್ನು ಕಥೆಗಳ ರೋಚಕ ಜಗತ್ತಿನತ್ತ ಸೆಳೆಯಲು ವಿಶಿಷ್ಟ ಪ್ರಯತ್ನವೊಂದು ಆರಂಭವಾಗಿದೆ.

  • News18 Kannada
  • |
  •   | Bangalore [Bangalore], India
First published:

  • 17

    World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

    ಮಕ್ಕಳಿಗೆ ಕಥೆ ಅಂದ್ರೆ ಪಂಚಪ್ರಾಣ. ಆದರೆ ಇತ್ತೀಚಿಗೆ ಮಕ್ಕಳು ಕಥೆಗಳಿಂದ ದೂರವಾಗ್ತಿದ್ದಾರೆ ಅನ್ನೋ ಮಾತಿದೆ. ಈ ಮಾತನ್ನು ಸುಳ್ಳಾಗಿಸಲು, ಮಕ್ಕಳನ್ನು ಕಥೆಗಳ ರೋಚಕ ಜಗತ್ತಿನತ್ತ ಸೆಳೆಯಲು ವಿಶಿಷ್ಟ ಪ್ರಯತ್ನವೊಂದು ಆರಂಭವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

    ಮಾರ್ಚ್ 20ರಂದು ಪ್ರತಿವರ್ಷ ವಿಶ್ವ ಕಥೆ ಹೇಳುವ ದಿನವನ್ನಾಗಿ ಆಚರಣೆ ಮಾಡಲಾಗುತ್ತೆ. ಮಕ್ಕಳನ್ನು ಕಥೆಗಳತ್ತ ಆಕರ್ಷಿಸಲು ಈ ದಿನದಂದು ಲಾಭರಹಿತ ಪ್ರಕಾಶನ ಸಂಸ್ಥೆ ಪ್ರಥಮ್ ಬುಕ್ಸ್​ನ ಸ್ಟೋರಿವೀವರ್ ಅಭಿಯಾನವೊಂದನ್ನು ಆಯೋಜಿಸುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

    ಮಕ್ಕಳು ಒಂದು ವಾರಕ್ಕೆ ಓದುವಷ್ಟು ಪುಸ್ತಕಗಳನ್ನು ಪ್ರಥಮ್ ಬುಕ್ಸ್ ಉಚಿತವಾಗಿ ನೀಡುತ್ತಿದೆ. ಈ ಪೋಸ್ಟರ್​ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಯಾರು ಬೇಕಾದರೂ ಈ ಉಚಿತ ಪುಸ್ತಕಗಳನ್ನು ಪಡೆದುಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

    ಪ್ರತಿ ವಾರ, ಸ್ಟೋರಿವೀವರ್ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ಫ್ರೆಂಚ್, ಸ್ಪ್ಯಾನಿಷ್ ಸೇರಿದಂತೆ 50 ಭಾಷೆಗಳಲ್ಲಿ ಮತ್ತು ಕಡಿಮೆ ಭಾಷಿಗರಿರುವ ಗೊಂಡಿ, ಕೊಂಕಣಿ, ಮೈಥಿಲಿ, ಸಿಂಧಿ, ಸುರ್ಜಾಪುರಿ ಮತ್ತು ಹೆಚ್ಚಿನವುಗಳಲ್ಲಿ ಕಥೆ ಪುಸ್ತಕವನ್ನು ಸಂಗ್ರಹಿಸುತ್ತಿದೆ. ಈ ಭಾಷೆಗಳ ಕಥೆ ಪುಸ್ತಕಗಳನ್ನು ಉಚಿತವಾಗಿ ಒಂದು ವಾರದ ಕಾಲ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

    ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಮಾರ್ಚ್ 20ರಿಂದ ಶುರುವಾದ ಈ ಅಭಿಯಾನ ಸೆಪ್ಟೆಂಬರ್ 8 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನದಂದು ಮುಕ್ತಾಯಗೊಳ್ಳಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

    ಮಕ್ಕಳಿಗೆ ಓದುವ ಹವ್ಯಾಸವನ್ನು ಕಲಿಸಲು ಸಾರ್ವಜನಿಕರನ್ನು ಹುರಿದುಂಬಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಒಟ್ಟು ಆರು ತಿಂಗಳ ಕಾಲ ಈ ಉಚಿತ ಪುಸ್ತಕ ಅಭಿಯಾನ ನಡೆಯಲಿದೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 77

    World Storytelling Day: ನಿಮ್ಮ ಮಕ್ಕಳಿಗೆ ಫ್ರೀ ಆಗಿ ಸಿಗುತ್ತೆ ಪುಸ್ತಕ, ಜಸ್ಟ್ ಇಷ್ಟು ಮಾಡಿ ಸಾಕು!

    ಒಟ್ಟಾರೆ ಈ ಅಭಿಯಾನದ ಮೂಲಕ ಉಚಿತ ಪುಸ್ತಕಗಳನ್ನು ಪಡೆದು ನೀವು ನಿಮ್ಮ ಮಕ್ಕಳಿಗೆ ಪುಸ್ತಕ ಓದುವ ಅಭ್ಯಾಸ ಬೆಳೆಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಪ್ರಥಮ್ ಬುಕ್ಸ್​ ಸಂಸ್ಥೆಯ 9051752638 ಅಥವಾ sreemoyee@prathambooks.org ಈ ಮೇಲ್ ಐಡಿಯನ್ನು ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES