ಜುಲೈ 7 ರಿಂದ ಜುಲೈ 17 ರವರೆಗೆ ಅಮೇರಿಕದಲ್ಲಿ ನಡೆಯಲಿರುವ ವಿಶ್ವ ಕ್ರೀಡಾಕೂಟ 2022 ರಲ್ಲಿ ಒಟ್ಟು 14 ಸದಸ್ಯರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಬೆಂಗಳೂರಿನ ಸ್ಕೇಟರ್ ಧನುಷ್ ಬಾಬು ಸಹ ವಿಶ್ವ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
2/ 8
24 ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಸೇರಿದಂತೆ ಭಾರತೀಯ ತಂಡ 7 ಕ್ರೀಡೆಗಳಲ್ಲಿ ಭಾಗವಹಿಸಲಿದೆ.
3/ 8
ಭಾರತವು 1981 ರಲ್ಲಿ ಪ್ರಾರಂಭವಾದಾಗಿನಿಂದ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಿದೆ. 1 ಚಿನ್ನ, 1 ಬೆಳ್ಳಿ ಮತ್ತು ಎರಡು ಕಂಚು ಸೇರಿ ಇಲ್ಲಿಯವರೆಗೆ 4 ಪದಕಗಳನ್ನು ಗೆದ್ದಿದೆ.
4/ 8
ಬೆಂಗಳೂರಿನ 27 ವರ್ಷದ ಧನುಷ್ ಬಾಬು ಅವರು ಭಾರತದ ಅತ್ಯಂತ ವೇಗದ ಸ್ಕೇಟರ್ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದಾರೆ.
5/ 8
ಅಲ್ಲದೇ ಏಷಿಯನ್ ಬ್ರೋಂಜ್ ಮೆಡಲಿಸ್ಟ್ ಸಹ ಆಗಿರುವ ಧನುಷ್, ಜಾಗತಿಕ ಮಟ್ಟದ ಸ್ಕೇಟರ್ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
6/ 8
USA ನಲ್ಲಿ ಜುಲೈ 7 ರಿಂದ 17 ರವರೆಗೆ ನಡೆಯಲಿರುವ ವರ್ಡ್ ಗೇಮ್ಸ್ನಲ್ಲಿ ಭಾಗವಹಿಸಲಿರುವ ಮೊದಲ ಭಾರತೀಯ ಸ್ಕೇಟರ್ ಎಂಬ ಹಿರಿಮೆಗೂ ಅವರು ಪಾತ್ರರಾಗಲಿದ್ದಾರೆ.
7/ 8
ಅಂದಹಾಗೆ ಧನುಷ್ ಬಾಬು 4 ನೇ ವರ್ಷದಿಂದಲೂ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ವಿಶ್ವ ಕ್ರೀಡಾಕೂಟ 2022 ರಲ್ಲಿ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ ಧನುಷ್.
8/ 8
ಅಷ್ಟೇ ಅಲ್ಲದೇ ಅವರ ತಂದೆ ಬಾಲಾಜಿ ಬಾಬು ಅವರೇ ಚಿಕ್ಕಂದಿನಿಂದಲೂ ಟ್ರೇನಿಂಗ್ ನೀಡಿದ್ದಾರೆ ಎಂಬುದು ವಿಶೇಷವಾಗಿದೆ.