ಶಾದಿ ಡಾಟ್ ಕಾಮ್​​ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’.. ಎಲ್ಲಾ ಕಳೆದುಕೊಂಡು ಪತ್ನಿಯ ಕಣ್ಣೀರು!

ಬೆಂಗಳೂರು(Bengaluru Crime News): ಇತ್ತೀಚೆಗೆ ಬಾಳಸಂಗಾತಿಯನ್ನು ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಹುಡುಕುವ ಪರಿಪಾಠ ಹೆಚ್ಚಾಗುತ್ತಿದೆ. ಎಲ್ಲವೂ ಡಿಜಿಟಲ್ ಮಯವಾಗಿರೋವಾಗ ವರ-ವಧು ಅನ್ವೇಷಣೆಯೂ ಮ್ಯಾಟ್ರಿಮೋನಿ ಸೈಟ್ ಗಳಲ್ಲಿ ನಡೆಯುತ್ತಿದೆ. ಆದರೆ ಇದು ವಂಚಕರಿಗೂ ರಹದಾರಿಯಾಗಿದ್ದು, ಆನ್ ಲೈನ್ ಸಂಬಂಧಗಳು ವಂಚನೆಯಲ್ಲಿ ಕೊನೆಗೊಳ್ಳುತ್ತಿವೆ.

First published:

  • 15

    ಶಾದಿ ಡಾಟ್ ಕಾಮ್​​ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’.. ಎಲ್ಲಾ ಕಳೆದುಕೊಂಡು ಪತ್ನಿಯ ಕಣ್ಣೀರು!

    ಈ ಫೋಟೋದಲ್ಲಿರುವಾಕೆ ರಿಹಾನಾ ಬೇಗಂ, ಈಕೆಗೆ ಇದು 2ನೇ ಮದುವೆ. ಆನ್ ಲೈನ್ ನಲ್ಲಿ ಸೈಯದ್ ತಸ್ಕೀನ್ ಅಹ್ಮದ್ ಎಂಬಾತನ ಪರಿಚಯವಾಗಿತ್ತು. 2ನೇ ಮದುವೆಗೆ ಒಪ್ಪಿ ನಿಖಾ ಮಾಡಿಕೊಂಡವನು ಉಂಡೂ ಹೋದ ಕೊಂಡೂ ಹೋದ ಎನ್ನುವಂತೆ ವಂಚಿಸಿದ್ದಾನೆ.

    MORE
    GALLERIES

  • 25

    ಶಾದಿ ಡಾಟ್ ಕಾಮ್​​ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’.. ಎಲ್ಲಾ ಕಳೆದುಕೊಂಡು ಪತ್ನಿಯ ಕಣ್ಣೀರು!

    ಶಾದಿ ಡಾಟ್ ಕಾಮ್ ನಲ್ಲಿ (Shadi.com) ಪರಿಚಯವಾಗಿ ನಂಬಿಸಿ ಮದುವೆಯಾಗಿ ವಂಚನೆ ಮಾಡಿದ್ದಾನೆ. ಸೈಯದ್ ತಸ್ಕೀನ್ ಅಹ್ಮದ್ ವಿರುದ್ಧ ಪತ್ನಿ ರಿಹಾನಾ ಬೇಗಂ ಇಂದು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾಳೆ.

    MORE
    GALLERIES

  • 35

    ಶಾದಿ ಡಾಟ್ ಕಾಮ್​​ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’.. ಎಲ್ಲಾ ಕಳೆದುಕೊಂಡು ಪತ್ನಿಯ ಕಣ್ಣೀರು!

    ನಂಬಿಸಿ ಮದುವೆಯಾದ ವಂಚಕ ಪತಿ, ತನ್ನ ಮನೆಯ ಕಾಮಗಾರಿ ನಡೆಯುತ್ತಿದೆ ಅಂತೇಳಿ ಪತ್ನಿ ಮನೆಯಲ್ಲೇ ವಾಸವಿದ್ದನಂತೆ. ಮದುವೆಯಾದ ಒಂದೇ ತಿಂಗಳಿಗೆ ಬ್ಯುಸಿನೆಸ್ ಗೆ ಹಣ ಬೇಕು ಅಂತ ಲಕ್ಷ ಲಕ್ಷ ಪೀಕಿದ್ದಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 45

    ಶಾದಿ ಡಾಟ್ ಕಾಮ್​​ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’.. ಎಲ್ಲಾ ಕಳೆದುಕೊಂಡು ಪತ್ನಿಯ ಕಣ್ಣೀರು!

    ಮೂರು ತಿಂಗಳ ಬಳಿಕ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾನೆ. ಇದೇ ರೀತಿ ಐದಾರು ಮದುವೆಯಾಗಿ ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಆರೋಪಿ ಸೈಯದ್ ತಸ್ಕೀನ್ ಅಹ್ಮದ್ ಶಿವಾಜಿನಗರ ನಿವಾಸಿಯಾಗಿದ್ದು, ಹಣ ಕೊಡದೆ ತಲೆಮರೆಸಿಕೊಂಡಿದ್ದಾನಂತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 55

    ಶಾದಿ ಡಾಟ್ ಕಾಮ್​​ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’.. ಎಲ್ಲಾ ಕಳೆದುಕೊಂಡು ಪತ್ನಿಯ ಕಣ್ಣೀರು!

    ವರ್ಷದ ಹಿಂದೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ರಿಹಾನಾ ಬೇಗಂ ದೂರು ನೀಡಿದ್ರೂ ಏನೂ ಪ್ರಯೋಜನವಾಗಿಲ್ಲವಂತೆ. ಈ ಹಿನ್ನೆಲೆ ಪತಿ ವಿರುದ್ಧ ಕಮಿಷನರ್ ಗೆ ದೂರು ನೀಡಿದ್ದಾರೆ.

    MORE
    GALLERIES