ವಂದೇ ಭಾರತ್ ರೈಲಿಗೆ ಹೆಚ್ಚಿದ ಬೇಡಿಕೆಯಿಂದ ಪ್ರಮುಖ ರೈಲೊಂದು ರದ್ದಾಗುವ ಸಾಧ್ಯತೆ ಹುಟ್ಟಿಕೊಂಡಿದೆ. (ಸಾಂದರ್ಭಿಕ ಚಿತ್ರ)
2/ 8
ಇತ್ತೀಚಿಗಷ್ಟೇ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು ಸಂಚಾರ ಆರಂಭಿಸಿತ್ತು. ದಕ್ಷಿಣ ಬಾರತದ ಮೊದಲ ವಂದೆ ಭಾರತ್ ರೈಲು ಎಂಬ ಹಿರಿಮೆಗೆ ಈ ರೈಲು ಪಾತ್ರವಾಗಿತ್ತು. (ಸಾಂದರ್ಭಿಕ ಚಿತ್ರ)
3/ 8
ಈ ಮುನ್ನವೇ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಜನ ಶತಾಬ್ದಿ ರೈಲು ಸೇವೆ ನೀಡುತ್ತಿತ್ತು. (ಸಾಂದರ್ಭಿಕ ಚಿತ್ರ)
4/ 8
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಇದೀಗ ಇನ್ನೊಂದು ರೈಲಿಗೆ ಪೈಪೋಟಿ ನೀಡುತ್ತಿದೆ. (ಸಾಂದರ್ಭಿಕ ಚಿತ್ರ)
5/ 8
ಆದರೆ ಹೊಸದಾಗಿ ಆರಂಭಿಸಿದ ವಂದೇ ಭಾರತ್ ರೈಲು ಸಹ ಬಹುತೇಕ ಜನ ಶತಾಬ್ಧಿ ರೈಲಿನ ಸಮಯದಲ್ಲೇ ಸಂಚರಿಸುತ್ತಿತ್ತು. ಕೇವಲ 10 ನಿಮಿಷಗಳ ಅಂತರದಲ್ಲಿ ಈ ಎರಡೂ ರೈಲುಗಳು ಸಂಚರಿಸುತ್ತಿದ್ದವು. (ಸಾಂದರ್ಭಿಕ ಚಿತ್ರ)
6/ 8
ಇದರ ಪರಿಣಾಮವಾಗಿ ಜನ ಶತಾಬ್ದಿ ರೈಲಿನ ಶೇಕಡಾ 40ರಷ್ಟು ಪ್ರಯಾಣಿಕರು ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
7/ 8
ಹೀಗಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪರಿಣಾಮದಿಂದ ಜನ ಶತಾಬ್ದಿ ರೈಲನ್ನು ರದ್ದುಗೊಳಿಸುವ ಪ್ರಸ್ತಾಪವೂ ರೈಲ್ವೆ ಇಲಾಖೆಯ ಮುಂದಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಆದರೆ ಇನ್ನೂ ಕೆಲವು ಕಾಲ ಈ ಎರಡೂ ರೈಲುಗಳ ಪ್ರಯಾಣಿಕರ ಸಂಖ್ಯೆಯನ್ನು ಅಧ್ಯಯನ ನಡೆಸಿ, ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಸಾಧ್ಯತೆ ಇದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)