ಯುಗಾದಿ ಹಬ್ಬದ ಸಂಕೇತವೇ ಬೇವು – ಬೆಲ್ಲ. ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು, ಬೆಲ್ಲ ಸೇವಿಸಲಾಗುತ್ತದೆ. ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ. ಈ ವರ್ಷವಾದರೂ ಬೆಲೆ ಏರಿಕೆ ಇಳಿದು ಜನಸಾಮಾನ್ಯರಿಗೆ ನೆಮ್ಮದಿಯ ಜೀವನ ಬರಲಿ ಎಂದು ಆಶಿಸೋಣವೇ? (ಸಾಂದರ್ಭಿಕ ಚಿತ್ರ)