Bengaluru Crime: ಸಾಲ ಪಡೆಯುವ ಮುನ್ನ ಎಚ್ಚರ.. ಕೋಟಿ ಕೋಟಿ ವಂಚಿಸುವ ಗ್ಯಾಂಗ್ ಬಲೆಗೆ ನೀವೂ ಬೀಳಬಹುದು!

ಬೆಂಗಳೂರು: ಹಣಕಾಸು ಸಂಸ್ಥೆಯಿಂದ ಸಾಲ (Loans) ಕೊಡಿಸುವುದಾಗಿ ಮೂವರು ಉದ್ಯಮಿಗಳಿಗೆ (Businessmen) ಗ್ಯಾಂಗ್ ವೊಂದು 9.5 ಕೋಟಿ ರೂಪಾಯಿ ವಂಚನೆ ಮಾಡಿದೆ. ಅಶೋಕನಗರದ ಉದ್ಯಮಿ ಗಿರೀಶ್ ಪಿ (48) ಮತ್ತು ಅರುಣಾಚಲ ಪ್ರದೇಶ ಮೂಲದ ಉದ್ಯಮಿ ತಾರಂ ಎಂಬುವರು ವಂಚಕರ ವಿರುದ್ಧ ಸುದ್ದನಗುಂಟೆ ಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

First published:

  • 16

    Bengaluru Crime: ಸಾಲ ಪಡೆಯುವ ಮುನ್ನ ಎಚ್ಚರ.. ಕೋಟಿ ಕೋಟಿ ವಂಚಿಸುವ ಗ್ಯಾಂಗ್ ಬಲೆಗೆ ನೀವೂ ಬೀಳಬಹುದು!

    ಬೆಂಗಳೂರಿನ ಮತ್ತೊಬ್ಬ ಉದ್ಯಮಿಗೆ 3.6 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಗಿರೀಶ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎರಡು FIRಗಳ ಪ್ರಕಾರ ಗಿರೀಶ್ ಗೆ 2.3 ಕೋಟಿ ರೂ., ತಾರಾಮ್ ಮತ್ತು ಮೂರನೇ ಉದ್ಯಮಿ ತಲಾ 3.6 ಕೋಟಿ ರೂ. ವಂಚಿಸಲಾಗಿದೆ. ಡೇನಿಯಲ್ ಆರ್ಮ್ ಸ್ಟ್ರಾಂಗ್, ವಿವೇಕಾನಂದ ಕುಮಾರ್ ಮತ್ತು ರವಿ ರಾಘವನ್ ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ.

    MORE
    GALLERIES

  • 26

    Bengaluru Crime: ಸಾಲ ಪಡೆಯುವ ಮುನ್ನ ಎಚ್ಚರ.. ಕೋಟಿ ಕೋಟಿ ವಂಚಿಸುವ ಗ್ಯಾಂಗ್ ಬಲೆಗೆ ನೀವೂ ಬೀಳಬಹುದು!

    ಉದ್ಯಮಿ ಗಿರೀಶ್ ಅವರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಹೊಂದಿದ್ದಾರೆ. ಇತ್ತೀಚೆಗೆ ಹೊಸ ಯೋಜನೆಗೆ ಮುಂದಾಗಿದ್ದರು. ಕಡಿಮೆ ಬಡ್ಡಿಗೆ ಸಾಲದ ನಿರೀಕ್ಷೆಯಲ್ಲಿದ್ದರು. ದುಷ್ಕರ್ಮಿಯೊಬ್ಬ ಗಿರೀಶ್ ಅವರಿಗೆ ಕರೆ ಮಾಡಿ ಬಿಟಿಎಂ ಲೇಔಟ್ ಸಮೀಪದ ಕೃಷ್ಣಾ ನಗರದಲ್ಲಿ ಫೈನಾನ್ಸ್ ಸಂಸ್ಥೆ ನಡೆಸುತ್ತಿರುವ ಆರ್ಮ್ಸ್ಟ್ರಾಂಗ್ ಅವರನ್ನು ಸಂಪರ್ಕಿಸುವಂತೆ ಹೇಳಿದ್ದಾನೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 36

    Bengaluru Crime: ಸಾಲ ಪಡೆಯುವ ಮುನ್ನ ಎಚ್ಚರ.. ಕೋಟಿ ಕೋಟಿ ವಂಚಿಸುವ ಗ್ಯಾಂಗ್ ಬಲೆಗೆ ನೀವೂ ಬೀಳಬಹುದು!

    ವಿವೇಕಾನಂದ ಮತ್ತು ರಾಘವನ್ ಅವರನ್ನು ಭೇಟಿಯಾದ ಬಳಿಕ ನವೆಂಬರ್ 8 ರಂದು ಗಿರೀಶ್ ಅವರಿಗೆ ಇಮೇಲ್ ಬಂದಿತು. ಅದರಲ್ಲಿ 150 ಕೋಟಿ ರೂಪಾಯಿಗಳನ್ನು ಸಾಲವಾಗಿ ಮಂಜೂರು ಮಾಡಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 46

    Bengaluru Crime: ಸಾಲ ಪಡೆಯುವ ಮುನ್ನ ಎಚ್ಚರ.. ಕೋಟಿ ಕೋಟಿ ವಂಚಿಸುವ ಗ್ಯಾಂಗ್ ಬಲೆಗೆ ನೀವೂ ಬೀಳಬಹುದು!

    ನಾನು ನವೆಂಬರ್ 9 ರಂದು ಆರ್ಮ್ಸ್ಟ್ರಾಂಗ್ ಅವರನ್ನು ಭೇಟಿ ಮಾಡಿದೆ. ಅವರು ಮೊದಲ ಮೂರು ತಿಂಗಳ ಬಡ್ಡಿಯ ಮುಂಗಡ ಪಾವತಿಯಾಗಿ 3 ಕೋಟಿ ರೂ. ಮತ್ತು ಬದ್ಧತೆಯ ಶುಲ್ಕವಾಗಿ 2.3 ಕೋಟಿ ಪಾವತಿಸಲು ಕೇಳಿದರು . (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 56

    Bengaluru Crime: ಸಾಲ ಪಡೆಯುವ ಮುನ್ನ ಎಚ್ಚರ.. ಕೋಟಿ ಕೋಟಿ ವಂಚಿಸುವ ಗ್ಯಾಂಗ್ ಬಲೆಗೆ ನೀವೂ ಬೀಳಬಹುದು!

    ನಾನು ನವೆಂಬರ್ 15 ರಂದು 2.3 ಕೋಟಿ ರೂ.ಗಳನ್ನು ವರ್ಗಾಯಿಸಿದೆ. ಅವರು ನವೆಂಬರ್ 16 ರೊಳಗೆ ಸಾಲವನ್ನು ವಿತರಿಸಬೇಕಾಗಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಹಾಗಾಗಿ ಅವರ ಕಚೇರಿಗೆ ಭೇಟಿ ನೀಡಿದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಗಿರೀಶ್ ಹೇಳಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 66

    Bengaluru Crime: ಸಾಲ ಪಡೆಯುವ ಮುನ್ನ ಎಚ್ಚರ.. ಕೋಟಿ ಕೋಟಿ ವಂಚಿಸುವ ಗ್ಯಾಂಗ್ ಬಲೆಗೆ ನೀವೂ ಬೀಳಬಹುದು!

    ಇದೇ ಮೂವರ ತಂಡ ತನಗೂ 3.6 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಮತ್ತೊಬ್ಬರು ದೂರುದಾರ ತಾರಾಮ್ ಆರೋಪಿಸಿದ್ದಾರೆ. ತಾರಾಮ್ ಅವರಿಗೂ ವಂಚಕರ ತಂಡ ಇದೇ ಮಾದರಿ ಮೇಲ್ ಕಳುಹಿಸಿ, ಮುಂಗಣ ಮೊತ್ತವಾಗಿ ಹಣ ಪಡೆದು ವಂಚಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES