ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಕರ್ನಾಟಕದ ವಿವಿಧ ಊರುಗಳಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ವಿಶೇಷ ರೈಲುಗಳು ಇನ್ನಷ್ಟು ದಿನ ಸೇವೆ ನೀಡಲಿವೆ. (ಸಾಂದರ್ಭಿಕ ಚಿತ್ರ)
2/ 8
ಬೆಂಗಳೂರಿನ ಯಶವಂತಪುರದಿಂದ ವಿಜಯಪುರಕ್ಕೆ ಪ್ರತಿದಿನ ಸಂಚರಿಸುತ್ತಿದ್ದ ವಿಶೇಷ ರೈಲನ್ನು ಮಾರ್ಚ್ 31ರ ತನಕ ಮುಂದುವರೆಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. (ಸಾಂದರ್ಭಿಕ ಚಿತ್ರ)
3/ 8
ಜೊತೆಗೆ ವಿಜಯಪುರ-ಯಶವಂತಪುರ ವಿಶೇಷ ರೈಲು ಸಹ ಏಪ್ರಿಲ್ 1ರವರೆಗೆ ಸೇವೆ ಮುಂದುವರೆಸಲಿದೆ. (ಸಾಂದರ್ಭಿಕ ಚಿತ್ರ)
4/ 8
ಶಿವಮೊಗ್ಗದಿಂದ ಎಂಜಿಆರ್ ಚೆನ್ನೈ ವಿಶೇಷ ರೈಲು ವಾರಕ್ಕೆ ಎರಡು ಬಾರಿ ಸೇವೆ ನೀಡುತ್ತಿತ್ತು. ಸದ್ಯ ಈ ರೈಲನ್ನು 2023ರ ಮಾರ್ಚ್ 28ರ ತನಕ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಅದೇ ರೀತಿ ಚೆನ್ನೈ-ಶಿವಮೊಗ್ಗ ವಿಶೇಷ ರೈಲಿನ ಸೇವೆಯನ್ನು ಮಾರ್ಚ್ 29ನೇ ತಾರೀಕಿನವರೆಗೆ ಮುಂದುವರೆಸುವಂತೆ ನಿರ್ಧರಿಸಲಾಗಿದೆ. (ಸಾಂದರ್ಭಿಕ ಚಿತ್ರ)
6/ 8
[caption id="attachment_901925" align="alignnone" width="1440"] ಇದರ ಜೊತೆಗೆ ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲಿನ ಸೇವೆಯನ್ನೂ ಮುಂದುವರೆಸಲು ತೀರ್ಮಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)
[/caption]
7/ 8
ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿದ್ದ ಈ ರೈಲು ಸೇವೆಯನ್ನು ಮಾರ್ಚ್ 25ರ ತನಕ ಮುಂದುವರೆಸಲು ನಿರ್ಧರಿಸಲಾಗಿದೆ. ಅಲ್ಲದೇ ರಾಮೇಶ್ವರಂ-ಹುಬ್ಬಳ್ಳಿ ರೈಲು ಸಹ ಮಾರ್ಚ್ 26ರವರೆಗೆ ಸಂಚರಿಸಲಿದೆ. ಈ ಎರಡೂ ರೈಲುಗಳು ವಾರಕ್ಕೊಮ್ಮೆ ಸೇವೆ ಒದಗಿಸುತ್ತವೆ. (ಸಾಂದರ್ಭಿಕ ಚಿತ್ರ)
8/ 8
ಈ ಎಲ್ಲಾ ರೈಲುಗಳ ಸೇವೆಯನ್ನು ಡಿಸೆಂಬರ್ ತಿಂಗಳಿನಿಂದ 2023ರ ಮಧ್ಯಭಾಗದವರೆಗೂ ಮುಂದುವರೆಸಿರುವುದು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)