ಕರ್ನಾಟಕದ ರೈಲು ಪ್ರಯಾಣಿಕರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 8
ಭಾರತೀಯ ರೈಲ್ವೇಯು ಬೆಂಗಳೂರು ವಿಭಾಗದ ದೊಡ್ಡಜಾಲ, ಆವತಿಹಳ್ಳಿ ರೈಲು ನಿಲ್ದಾಣಗಳನ್ನೂ ಸೇರಿ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
3/ 8
ಡಿಸೆಂಬರ್ 1, ಅಂದರೆ ಇಂದಿನಿಂದಲೇ ಬೆಂಗಳೂರು ವಿಭಾಗದ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿವೆ. ಈ ಕುರಿತು ಒನ್ ಇಂಡಿಯಾ ಕನ್ನಡ ಡಿಜಿಟಲ್ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)
4/ 8
ಕೋಲಾರ ಸಮೀಪದ ಹುಡುಕುಲ ಮತ್ತು ಜನ್ನಗಟ್ಟಾ, ಚಿಕ್ಕಬಳ್ಳಾಪುರದ ಗಿಡ್ನಹಳ್ಳಿ ಮತ್ತು ಆಂಧ್ರಪ್ರದೇಶದ ಕೊಟ್ಟಚೆರುವು ರೈಲು ನಿಲುಗಡೆ ನಿಲ್ದಾಣಗಳು ಮುಚ್ಚಲಿವೆ. (ಸಾಂದರ್ಭಿಕ ಚಿತ್ರ)
5/ 8
ಈ ರೈಲು ನಿಲ್ದಾಣಗಳಲ್ಲಿ ಏಜೆಂಟ್ಗಳಿಗೆ ಆದಾಯ ಕಡಿಮೆ ಆಗಿದ್ದು, ನಿರುತ್ಸಾಹ ತೋರಿದ ಕಾರಣ ಮುಚ್ಚು ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಏಜೆಂಟ್ಗಳು ರೈಲು ನಿಲುಗಡೆ ನಿಲ್ದಾಣಗಳಲ್ಲಿ ಮಾರಾಟವಾಗುವ ಟಿಕೆಟ್ಗಳಿಂದ ಕಮಿಷನ್ ಪಡೆಯುತ್ತಾರೆ. ಟಿಕೆಟ್ಗಳ ಮಾರಾಟ ಕಡಿಮೆಯಾದ ಕಾರಣ ಅವರ ಆದಾಯವು ಕುಸಿದಿದೆ. (ಸಾಂದರ್ಭಿಕ ಚಿತ್ರ)
7/ 8
ಇದರಿಂದ ಈ ರೈಲು ನಿಲುಗಡೆ ನಿಲ್ದಾಣಗಳ ಏಜೆಂಟ್ಗಳಲ್ಲಿ ಉತ್ಸಾಹ ಕಡಿಮೆಯಾಗಿದೆ. ಹೀಗಾಗಿ ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಸದ್ಯ ನೈಋತ್ಯ ರೈಲ್ವೇಯು ನಿಲುಗಡೆ ನಿಲ್ದಾಣಗಳು ಇರುವ ಊರುಗಳ ಖಾಯಂ ನಿವಾಸಿಗಳಿಂದ ಏಜೆಂಟ್ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ. (ಸಾಂದರ್ಭಿಕ ಚಿತ್ರ)