Indian Railway: ರೈಲು ಪ್ರಯಾಣಿಕರಿಗೆ ಇಲ್ಲೊಂದು ಕಹಿ ಸುದ್ದಿ ಇದ್ದು ಮೇ 25 ರಿಂದ 2 ದಿನಗಳ ಕಾಲ ಕೆಲ ರೈಲು ಸೇವೆಗಳಲ್ಲಿ ವ್ಯತ್ಯಾಸವಾಗಲಿದ್ದು, ಕೆಲ ರೈಲುಗಳನ್ನು ಸ್ಥಗಿತ ಮಾಡಲಾಗಿದೆ. ಯಾವೆಲ್ಲಾ ರೈಲುಗಳನ್ನು ಸದ್ಯ ಸ್ಥಗಿತ ಮಾಡಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗದ ರೈಲು ಪ್ರಯಾಣಿಕರಿಗೆ 2 ದಿನಗಳ ಕಾಲ ರೈಲು ಸಮಸ್ಯೆ ಆಗಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ರೈಲ್ವೆ ಹಳಿ ರಿಪೇರಿ ಸೇರಿದಂತೆ ಅನೇಕ ಕಾಮಾಗಾರಿಗಳು ನಡೆಯುತ್ತಿರುವ ಕಾರಣದಿಂದ ಮೇ 25ರಿಂದ ಮೇ 27ರ ವರೆಗೆ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ.
2/ 8
ರೈಲು ಸಮಸ್ಯೆ ಆಗುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ರೈಲ್ವೆ ಹಲವು ಕಡೆಗಳಲ್ಲಿ ಕ್ರಾಸಿಂಗ್ ಸಮಸ್ಯೆಗಳಿದ್ದು, ಇನ್ನೂ ಹಲವೆಡೆ ಹಳಿಗಳ ಕಾಮಗಾರಿ ಮಾಡಲಾಗುತ್ತಿದೆ. ಈ ಕಾರಣದಿಂದ ಕೆಲ ಸಮಯದವರೆಗೆ ರೈಲುಗಳ ಸಮಸ್ಯೆ ಆಗುತ್ತದೆ. ಅಲ್ಲದೇ, ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
3/ 8
ಈ ಕಾಮಗಾರಿಗಳ ಕಾರಣದಿಂದ ಉತ್ತರ ಕರ್ನಾಟಕ ಭಾಗದ ಅನೇಕ ರೈಲುಗಳು ರದ್ದಾಗಿವೆ. ಇಷ್ಟೇ ಅಲ್ಲದೇ ಮೈಸೂರು, ಚಿತ್ರದುರ್ಗ, ತಾಳಗುಪ್ಪ ಹೋಗುವ ಅನೇಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಯಾವೆಲ್ಲಾ ರೈಲುಗಳು ರದ್ದಾಗಲಿದೆ ಎಂಬುದು ಇಲ್ಲಿದೆ.
4/ 8
ಕೆಎಸ್‌ಆರ್-ಬೆಂಗಳೂರು ರೈಲು ಸಂಖ್ಯೆ 12614 ಸಂಚಾರ ರದ್ದು ಮಾಡಲಾಗಿದ್ದು, ಮೇ 25, 27ರಂದು ಬೆಂಗಳೂರು ಕೆಎಸ್‌ಆರ್‌ನಿಂದ ತುಮಕೂರು ತೆರಳುವ ರೈಲು (06571) ಸಂಚಾರ ಸ್ಥಗಿತ ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
5/ 8
ಮೇ 25, 27ರಂದು ಯಶವಂತಪುರ- ಶಿವಮೊಗ್ಗ ನಗರ (16579) ಮಾರ್ಗದ ರೈಲುಗಳ ಸಂಚಾರದಲ್ಲಿ ಸಹ ಸಮಸ್ಯೆ ಆಗಲಿದ್ದು, ಮೇ 25 ರಂದು ಕೇವಲ ಒಂದು ದಿನಕ್ಕೆ ಮಾತ್ರ ಯಶವಂತಪುರ- ವಾಸ್ಕೋ 17309 ಸಂಖ್ಯೆಯ ರೈಲು ಸಂಚಾರ ರದ್ದು ಮಾಡಲಾಗಿದೆ.
6/ 8
ಹಾಗೆಯೇ, ಮೇ 25 ರಂದು ಮೈಸೂರು-ಬೆಳಗಾವಿ (17326), ಮೇ 27ರಂದು ಯಶವಂತಪುರ-ವಾಸ್ಕೋ (17309) ರೈಲು ಸಹ ಸ್ಥಗಿತಗೊಂಡಿದ್ದು, ಈ ಭಾಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಅಥವಾ ಪರ್ಯಾಯ ಮಾರ್ಗವನ್ನು ಅನುಸರಿಸುವಂತೆ ಇಲಾಖೆ ಸೂಚನೆ ನೀಡಿದೆ.
7/ 8
ಇನ್ನು ಚಿಕ್ಕಮಗಳೂರುನಿಂದ ಯಶವಂತಪುರ ರೈಲನ್ನು ಮೇ 25 ಮತ್ತು ಮೇ 27ರಂದು ಹಾಗೂ ಮೇ 25, 27ರಂದು ತುಮಕೂರು-ಬೆಂಗಳೂರು (06576) ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಹಾಗೆಯೇ, ಮೇ 25, 27ರಂದು ತಾಳಗುಪ್ಪ ಬೆಂಗಳೂರು (20652) ರೈಲನ್ನು ಸಹ ಸ್ಥಗಿತಗೊಳಿಸಲಾಗಿದೆ.
8/ 8
ಮೇ 25, 27ರಂದು ಕೆಎಸ್‌ಆರ್-ಧಾರವಾಡ (12725), ಮೇ 25, 27ರಂದು ಧಾರವಾಡ- ಬೆಂಗಳೂರು (12726), ಮೇ 25, 27ರಂದು ತುಮಕೂರು-ಚಾಮರಾಜನಗರ ರೈಲು (17346), ಮೇ 27ರಂದು ಹುಬ್ಬಳ್ಳಿ-ರಾಮೇಶ್ವರಂ (07355), ಮೇ 26 ವಾಸ್ಕೋ- ಬೆಂಗಳೂರು ಯಶವಂತಪುರ (17310) ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ.
First published:
18
Train Cancel: 2 ದಿನ ಈ ಮಾರ್ಗದ ರೈಲುಗಳ ಸಂಚಾರ ರದ್ದು