ದೇಶದ ಮೊದಲ ಗ್ಯಾಜೆಟ್ ಡೀ ಅಡಿಕ್ಷನ್ ಕ್ಲಿನಿಕ್ ಬೆಂಗಳೂರಲ್ಲಿ ಆರಂಭವಾಗಿದೆ. ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪೋಷಕರು ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಇಲ್ಲಿ ಮಾಹಿತಿ-ಚಿಕಿತ್ಸೆ ನೀಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
2/ 7
16 ರಿಂದ 20 ವರ್ಷದೊಳಗಿನ ಮಕ್ಕಳಲ್ಲಿ ಗ್ಯಾಜೆಟ್ ಅಡಿಕ್ಷನ್ ಹೆಚ್ಚುತ್ತಿದೆ. ಬ್ರೌಸಿಂಗ್, ಚಾಟಿಂಗ್, ಗೇಮಿಂಗ್ನಲ್ಲಿ ಮುಳುಗಿರುವ ಮಕ್ಕಳು ಜಗದ ಪರಿವೆಯನ್ನೇ ಮರೆತುಬಿಡುವ ಅಪಾಯ ಎದುರಾಗುತ್ತಿದೆ. (ಸಾಂದರ್ಭಿಕ ಚಿತ್ರ
3/ 7
ನಿಮ್ಹಾನ್ಸ್ನಲ್ಲಿ SHUT ಕ್ಲಿನಿಕ್ ಎಂಬ ಹೆಸರಲ್ಲಿ ಗ್ಯಾಜೆಟ್ ಡೀ ಅಡಿಕ್ಷನ್ ಚಿಕಿತ್ಸೆ ನೀಡಲಾಗುತ್ತಿದೆ.
4/ 7
ಗ್ಯಾಜೆಟ್ ಆಡಿಕ್ಷನ್ನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ. ಇಂತಹ ದುಷ್ಟರಿಣಾಮಗಳಿಗೆ ಚಿಕಿತ್ಸೆ ಕೊಡಲು ಈ ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ
5/ 7
SHUT ಎಂದರೆ Service For Healthy Use of Technology ಎಂದರ್ಥ. SHUT ಕ್ಲಿನಿಕ್ನಲ್ಲಿ ವಾರಕ್ಕೆ 15 ರಿಂದ 20 ಮಕ್ಕಳಿಗೆಚಿಕಿತ್ಸೆ ನೀಡಲಾಗುತ್ತಿದೆ ಎಂದು ನಿಮ್ಹಾನ್ಸ್ನ SHUT ಕ್ಲಿನಿಕ್ ವೈದ್ಯ ಮನೋಜ್ ಕುಮಾರ್ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ
6/ 7
ಯಾವಾಗಲೂ ವಾಟ್ಸ್ಪ್, ಫೇಸ್ಬುಕ್, ಇನ್ಸ್ಟಾಗ್ರಾಂ ನೋಡುವ ಹಂಬಲ ಇದ್ದರೆ ಈ ಚಿಕಿತ್ಸೆಯ ಅಗತ್ಯವಿದೆ ಎಂದರ್ಥ. ಇವರು ಅಗತ್ಯವಿರಲಿ ಬಿಡಲಿ, ಪದೇ ಪದೇ ಮೊಬೈಲ್ ನೋಡುತ್ತಲೇ ಇರುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ
7/ 7
ಇಡೀ ದೇಶದಲ್ಲೇ ಇಂತಹ ಚಿಕಿತ್ಸೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭವಾಗಿದೆ. (ಸಾಂದರ್ಭಿಕ ಚಿತ್ರ