ಬೆಂಗಳೂರಿನ ಲಾಲ್ಬಾಗ್ನಲ್ಲಿ ಮತ್ತೆ ಪುಷ್ಪಲೋಕವೇ ಅರಳಲಿದೆ. ವಿಶ್ವಪ್ರಸಿದ್ಧ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ ಮತ್ತೆ ಸೌಂದರ್ಯವನ್ನೇ ಹೊದ್ದು ಪ್ರವಾಸಿಗರನ್ನ ಕೈಬೀಸಿ ಕರೆಯಲಿದೆ. (ಸಾಂದರ್ಭಿಕ ಚಿತ್ರ) ಇದೇ ಜನವರಿ 19ರಿಂದ ಜನವರಿ 29ರವರೆಗೆ ಲಾಲ್ಬಾಗ್ನಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ) ಈ ಫಲಪುಷ್ಪ ಪ್ರದರ್ಶನದಲ್ಲಿ ಲಾಲ್ಬಾಗ್ ಗಾಜಿನ ಉದ್ಯಾನವನ ಹೂವುಗಳಿಂದ ಅಲಂಕಾರವಾಗೋದು ನೋಡೋದೇ ಕಣ್ಣಿಗೆ ಹಬ್ಬದಂತಿರುತ್ತದೆ. (ಸಾಂದರ್ಭಿಕ ಚಿತ್ರ) ಡಾರ್ಜಿಲಿಂಗ್, ಕೇರಳ, ತಮಿಳುನಾಡು ಮುಂತಾದ ರಾಜ್ಯಗಳಿಂದಲೂ ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಹೂಗಳನ್ನು ತರಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ) ಫಲಪುಷ್ಪ ಪ್ರದರ್ಶನಕ್ಕೆ ಸಂಬಂಧಿಸಿದ ವಿಷಯಗಳನ್ನೇ ಆಧರಿಸಿ ವಿವಿಧ ಪ್ರತಿಕೃತಿಗಳನ್ನು ತಯಾರಿಸೋದು ಇಲ್ಲಿ ಇನ್ನೊಂದು ಹೆಗ್ಗಳಿಕೆ. (ಸಾಂದರ್ಭಿಕ ಚಿತ್ರ) ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳೋಕೆ ಎಂದೇ ರಾಜ್ಯ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸೋದು ವಿಶೇಷ. (ಸಾಂದರ್ಭಿಕ ಚಿತ್ರ) ಲಾಲ್ಬಾಗ್ ಫಲಪುಷ್ಪ ಪ್ರದರ್ಶನದ ಜೊತೆಗೆ ತೋಟಗಾರಿಕಾ ಇಲಾಖೆಯು ಜನವರಿ 20 ಮತ್ತು 21ರಂದು ಪ್ರತ್ಯೇಕವಾಗಿ ತೋಟಗಾರಿಕಾ ಪ್ರದರ್ಶನವನ್ನು ಆಯೋಜಿಸಿದೆ. (ಸಾಂದರ್ಭಿಕ ಚಿತ್ರ) ಈ ಫಲಪುಷ್ಪ ಮತ್ತು ತೋಟಗಾರಿಕಾ ಪ್ರದರ್ಶನದ ಮೂಲಕ ಕೃಷಿಕರಿಗೂ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. (ಸಾಂದರ್ಭಿಕ ಚಿತ್ರ)