ಈ ವಾರದಿಂದ ವಿದೇಶಗಳಿಗೆ ರಾಜಧಾನಿ ರೋಸ್ ಗಳು ದುಪ್ಪಟ್ಟಾಗಿ ರಫ್ತು ಮಾಡಲಾಗ್ತಿದೆ. ಏಷ್ಯಾದ ಪ್ರಮುಖ ಹೂವು ಹರಾಜು ಕೇಂದ್ರ ಬೆಂಗಳೂರಿನ ಐಎಫ್ ಎಬಿ. ಐಎಫ್ ಎಬಿ ಸಂಸ್ಥೆಯಿಂದ ವಿದೇಶಗಳಿಗೆ ವಿವಿಧ ಬಗ್ಗೆ ರೋಸ್ ರಫ್ತು ಮಾಡುತ್ತಿದ್ದೆ. ಐಎಫ್ ಎಬಿ ನೋಂದಾಯಿತ 283 ಹೂವು ಬೆಳೆಗಾರರು ಪಾಲಿಹೌಸ್ ನಲ್ಲಿ ಬೆಳೆದ ರೋಸ್ ಗಳನ್ನು ಕೇಂದ್ರದಲ್ಲಿ ಪ್ಯಾಕಿಂಗ್ ಪ್ರಕ್ರಿಯೆ ನಡೆಯುತ್ತದೆ. (ಸಾಂದರ್ಭಿಕ ಚಿತ್ರ)
ಕಳೆದ ವರ್ಷ ಕೊರೊನಾದಿಂದ ರೋಸ್ ಗೆ ಬೇಡಿಕೆ ಇಳಿಕೆಯಾಗಿತ್ತು. ಆದ್ರೆ ಈ ಬಾರಿ ರಾಜಧಾನಿ ಸೇರಿದಂತೆ ಇಡೀ ದೇಶದಲ್ಲಿ ರೋಸ್ ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಈ ಬಾರಿ ಮಳೆ ಹಾಗೂ ಕೊರೊನಾ ಹೊಡೆತ ಆಗಬಹುದು ಅಂತ ಬಹುತೇಕ ರೈತರು ರೆಡ್ ರೋಸ್ ಬೆಳೆದಿಲ್ಲ .. ಹೀಗಾಗಿ ಹೆಬ್ಬಾಳದಲ್ಲಿರು ಅಂತರಾಷ್ಟ್ರೀಯ ಪುಪ್ಪ ಹರಾಜು ಕೇಂದ್ರಕ್ಕೆ ಗುಲಾಬಿಗಳನ್ನು ಹೊತ್ತು ತರುವ ರೈತರ ಸಂಖ್ಯೆ ಇಳಿಕೆಯಾಗಿದೆ.