ಬೆಂಗಳೂರು: ಸಿಲಿಕಾನ್ ಸಿಟಿನೇ ಹಾಗೆ ಸದಾ ವೇಗವಾಗಿ ಓಡುತ್ತಲೇ ಇರುತ್ತೆ. ಈ ನಗರದ ವೇಗಕ್ಕೆ ಜೊತೆಯಾಗೋದು ಅಷ್ಟು ಸುಲಭವಲ್ಲ. ಇಲ್ಲಿ ಒಂದು ಬದುಕು ಕಟ್ಟಿಕೊಳ್ಳಲು ಕೈಯಲ್ಲಿ ಹಣ ಇರಬೇಕು. ದುಡಿದು ಸಂಪಾದನೆ ಮಾಡಿ ಬದುಕೋದು ಸುಲಭದ ಮಾತಲ್ಲ.. ಅದಕ್ಕಾಗೇ ಕೆಲವರು ಹಣ ಮಾಡಲು ಕಳ್ಳ ದಾರಿ ಹಿಡಿಯುತ್ತಾರೆ.
ಇವರಿಬ್ಬರು ಯುವಕರೂ ಅಷ್ಟೇ ನಗರದ ಐಷಾರಾಮಿ ಜೀವನ ಕಂಡು ಕಣ್ಣರಳಿಸಿದ್ದರು. ಬದುಕಿದರೆ ಹೀಗೆ ದಿಲ್ ದಾರಾಗಿ ಬದುಕಬೇಕು ಎಂಬ ಭ್ರಮೆಗಳಿಗೆ ಬಿದ್ದಿದ್ದರು. ಅದಕ್ಕಾಗಿ ಇವರು ಹಿಡಿದಿದ್ದು ಮಾತ್ರ ಕಳ್ಳದಾರಿ.
2/ 4
ಐಷಾರಾಮಿ ಜೀವನಕ್ಕಾಗಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಆರೋಪಿಗಳನ್ನು ಆರ್.ಆರ್.ನಗರ ಠಾಣೆ ಪೊಲೀಸರ ಬಂಧಿಸಿದ್ದಾರೆ. ಬಂಧಿತರನ್ನು ಮಂಜುನಾಥ್ ಹಾಗೂ ಹೇಮಂತ್ ಎಂದು ಗುರುತಿಸಲಾಗಿದೆ.
3/ 4
ಬೀಗ ಹಾಕಿರುವ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಮನೆಯಲ್ಲಿ ಕೈ ಸಿಕ್ಕಿದನ್ನೆಲ್ಲಾ ದೋಚುತ್ತಿದ್ದರು. ಕಳ್ಳತನದ ಹಣ ಲಕ್ಷ ಲಕ್ಷಗಳಲ್ಲಿ ಇತ್ತು. ಆದರೆ ಹಣ ಎಣಿಸುತ್ತಿದ್ದ ಕೈಗಳಿಗೆ ಕೊನೆಗೂ ಪೊಲೀಸರು ಕೋಳ ತೊಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 4
ಬಂಧಿತರಿಂದ 9 ಲಕ್ಷ ಮೌಲ್ಯದ 48 ಗ್ರಾಂ ಚಿನ್ನಾಭರಣ, 6 ಬೈಕ್, 1 ಕಾರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಳ್ಳತನ ಮಾಡಿದ ಹಣದಲ್ಲಿ ಬೈಕ್- ಕಾರು ಖರೀದಿಸಿದ್ದರು.